Parliament Security : ‘ಸಂಸತ್ ಭದ್ರತಾ ಲೋಪ ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುತ್ತಿವೆ’ : ಪ್ರಧಾನಿ ಮೋದಿ ವಾಗ್ದಾಳಿ

ದೆಹಲಿ, ಡಿ.19: ಸಂಸತ್ ಭದ್ರತಾ ಲೋಪ ವಿಚಾರವಾಗಿ ಪ್ರಧಾನಿ ಮೋದಿ (Narendra Modi) ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಆರೋಪಿಗಳಿಗೆ ವಿರೋಧ ಪಕ್ಷಗಳ ಬೆಂಬಲವಿದೆ ಎಂದು ಆರೋಪಿಸಿದ ಅವರು, ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುವುದು ಬಹಳ ಅಪಾಯಕಾರಿ. ಸಂಸತ್ತಿನ ಭದ್ರತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ. ಪ್ರತಿಪಕ್ಷಗಳ ವರ್ತನೆ ಬೇಸರ ಉಂಟುಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರತಿಪಕ್ಷಗಳು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಕೋಪ ಮತ್ತು ಹತಾಶೆಯಿಂದ ಪ್ರತಿಪಕ್ಷಗಳು ದೊಡ್ಡ ತಪ್ಪು ಮಾಡುತ್ತಿವೆ. ಕೆಲವು ಹಿರಿಯ ಅಸ್ವಸ್ಥ […]

ಕಾಂಗ್ರೆಸ್‌ನಲ್ಲಿ ಅಹಿಂದಾ ಫೈಟ್ ; ಸಿದ್ದರಾಮೋತ್ಸವ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ಮತ್ತೊಂದು ಸಮಾವೇಶಕ್ಕೆ ಸಿದ್ಧತೆ

ಬೆಂಗಳೂರು, ಡಿ.17: ಲೋಕಸಭೆ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ (Congress) ಹಿಂದುಳಿದ ವರ್ಗಗಳ ನಾಯಕನ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆಂಬಲಿಗರು ಡಿಸೆಂಬರ್ 30ರಂದು ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಸಿ ಸುಮಾರು ಹತ್ತು ಲಕ್ಷ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರೆ, ಇನ್ನು ಮತ್ತೊಂದೆಡೆ ಕಾಂಗ್ರೆಸ್​ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ (BH Hariprasad) ಅವರು ಕೂಡ ಜನವರಿ ತಿಂಗಳಿನಲ್ಲೇ ಸಮಾವೇಶ ನಡೆಸಲು ತಯಾರಿ ನಡೆಸಿದ್ದಾರೆ. ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿದ್ದು […]

Vijay Diwas in India and Bangladesh: ವಿಜಯ್​ ದಿವಸ್​​: ಪಾಕಿಸ್ತಾನ ಬಗ್ಗು ಬಡಿದು ಭಾರತ ಕೀರ್ತಿ ಪತಾಕೆ ಹಾರಿಸಿದ ದಿನ

ಹೈದರಾಬಾದ್​: ಪ್ರತಿ ವರ್ಷ ಡಿಸೆಂಬರ್​ 16 ಅನ್ನು ವಿಜಯ್​ ದಿವಸ್​ ಆಗಿ ಆಚರಿಸಲಾಗುತ್ತದೆ. ಈ ದಿನದ ಮೂಲಕ 1971ರ ಪಾಕಿಸ್ತಾನದ ಮೇಲೆ ನಡೆದ ಯುದ್ಧದಲ್ಲಿ ಭಾರತದ ವಿಜಯದ ಸಂಕೇತ ಮತ್ತು ಬಾಂಗ್ಲಾದೇಶ ರಚನೆಯ ದಿನಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ದೇಶದ ರಕ್ಷಣಗೆ ಹೋರಾಡಿ ಸಾವನ್ನಪ್ಪಿದ ಯೋಧರ ತ್ಯಾಗ ಸ್ಮರಿಸಿ, ಅವರಿಗೆ ಗೌರವಿಸಲಾಗುವುದು. ಇತಿಹಾಸ: ವಿಜಯ್​ ದಿವಸದ ಇತಿಹಾಸವೂ 13 ದಿನದ ಹೋರಾಟವನ್ನು ಹೊಂದಿದೆ. ಡಿಸೆಂಬರ್​ 3, 1971ರಲ್ಲಿ ಆರಂಭವಾದ ಯುದ್ಧದಲ್ಲಿ ಭಾರತ ಜಯಿ ಸಾಧಿಸಿದ್ದರಿಂದ ಪೂರ್ವ ಪಾಕಿಸ್ತಾನವಾಗಿದ್ದ […]

Bescom power cut : ಬೆಂಗಳೂರು ಸುತ್ತಮುತ್ತ ಡಿ 16ರಿಂದ 2 ದಿನ ವಿದ್ಯುತ್‌ ಕಡಿತ

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ( Bescom) ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಡಿ.16 ಹಾಗೂ 17ರಂದು ಹಲವು ಕಡೆ ವಿದ್ಯುತ್‌ ವ್ಯತ್ಯಯವಾಗಲಿದೆ. ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಎರಡೂ ದಿನವೂ ಸಂಜೆ 5 ವಿದ್ಯುತ್‌ ಕಡಿತವಾಗಲಿದ್ದು. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಡಿಸೆಂಬರ್‌ 16ರ ಶನಿವಾರ ದುರ್ಗಾಂಬಿಕ ದೇವಸ್ಥಾನ, ನಿಟ್ಟುವಳ್ಳಿ. ರಾಷ್ಟ್ರೋತ್ಥಾನ ಶಾಲೆ, ಮಣಿಕಂಠ ವೃತ್ತ, ಶ್ರೀರಾಮ ಬಡಾವಣೆ, ಕರಿಯಮ್ಮ ದೇವಸ್ಥಾನ, ಜಯನಗರ ಎ ಮತ್ತು ಬಿ ಬ್ಲಾಕ್‌, ನಿಟ್ಟುವಳ್ಳಿ ಭಗೀರಥ ವೃತ್ತ, […]

Snow fall : ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಮಪಾತ

ಡಿಸೆಂಬರ್ 16 : ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಳಿಗಾಲ ಶುರುವಾಯಿತೆಂದರೆ ಹಿಮಪಾತದ ಮಧುರ ಕ್ಷಣಗಳು ಶುರುವಾಗುತ್ತವೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ಸಿಕ್ಕಿಂ ಸಹಿತ ಏಳೆಂಟು ರಾಜ್ಯಗಳಲ್ಲಿ ವರ್ಷದ ಹಿಮಪಾತ ಶುರುವಾಗಿದೆ. ಸ್ಥಳೀಯರು ಈ ಖುಷಿಯ ಕ್ಷಣಗಳನ್ನು ಅನುಭವಿಸಿದರೆ, ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಅಲ್ಲಿನ ಹಿಮ ಕ್ಷಣಗಳ ನೋಟ ಇಲ್ಲಿದೆ. ಉತ್ತರಾಖಂಡದ ಬಹುಭಾಗದಲ್ಲಿ ಈಗ ಹಿಮಪಾತ ನೋಡುವ ವಿಶೇಷ ಕ್ಷಣ., ಹಿಮಾಚಲ ಪ್ರದೇಶವೊಂದರಲ್ಲಿ ಬಿದ್ದ ಹಿಮಪಾತದ ನಡುವೆಯೂ ಸೇನಾ ಸಿಬ್ಬಂದಿ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. […]

ಮಹಿಳೆ ವಿವಸ್ತ್ರಗೊಳಿಸಿ ಮೆರವಣಿಗೆ ಪ್ರಕರಣ : ಕಾಕತಿ ಸಿಪಿಐ ಅಮಾನತು, ಬೆಳಗಾವಿಗೆ ಆಗಮಿಸಿದ ಕೇಂದ್ರ ಬಿಜೆಪಿ ತಂಡ

ಬೆಳಗಾವಿ: ಇಲ್ಲಿಯ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್​ ವಿಜಯಕುಮಾರ ಸಿನ್ನೂರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಸರ್ಕಾರಕ್ಕೆ ಮತ್ತು ಪೊಲೀಸ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು ಕಾಕತಿ ಸಿಪಿಐ […]

Christmas : ಕ್ರಿಸ್ಮಸ್​ಗೆ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜನೆ: ವಿಭಿನ್ನ ಶೈಲಿಯ ಕೇಕ್ ಸವಿದು ಎಂಜಾಯ್ ಮಾಡಿ

ಬೆಂಗಳೂರು, ಡಿ.16: ಸಿಲಿಕಾನ್ ಸಿಟಿಯಲ್ಲಿ ಕ್ರಿಸ್ಮಸ್ (Christmas) ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿದ್ದು, ಹಬ್ಬಕ್ಕೆ ಬೇಕಾದ ತಯಾರಿಗಳು ವಿಜೃಂಭಣೆಯಿಂದ ಸಾಗುತ್ತಿದೆ. ಹಬ್ಬದ ಸೊಬಗು ನಗರದಲ್ಲಿ ಜೋರಾಗಿದೆ.‌ ಈ ಮಧ್ಯೆ ಕ್ರಿಸ್ಮಸ್ ಸಲುವಾಗಿ ಕೇಕ್ ಶೋ (Cake Show) ಆಯೋಜನೆ ಮಾಡಿದ್ದು, ಇಂದಿನಿಂದ ಶುರುವಾಗಿ ಜನವರಿ 01 ರ ವರೆಗೂ ನಡೆಯಲಿದೆ. ಈ ಕೇಕ್ ಶೋಗೆ ಭೇಟಿ ನೀಡಿ ವಿಶೇಷ ರೀತಿಯ, ವಿಶೇಷ ವಿನ್ಯಾಸದ ಕೇಕ್​ಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕೇಕ್ ಸವಿದು ಎಂಜಾಯ್ ಮಾಡಿ. ಸಿಲಿಕಾನ್ […]

ಲೋಕಸಭೆ ಭದ್ರತಾ ಲೋಪ : ಸಂಕಷ್ಟಕ್ಕೀಡಾದ ಮನೋರಂಜನ್ ಕುಟುಂಬಸ್ಥರು

ಮೈಸೂರು, ಡಿ.16: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ (Parliament Security Breach) ಪ್ರಕರಣ​ಕ್ಕೆ ಸಂಬಂಧಿಸಿ ಮೈಸೂರಿನ ವಿಜಯನಗರದಲ್ಲಿರುವ ಆರೋಪಿ ಮನೋರಂಜನ್ (D Manoranjan) ಕುಟುಂಬಸ್ಥರಿಗೆ ಈಗ ಸಂಕಷ್ಟ ಎದುರಾಗಿದೆ. ಶುಕ್ರವಾರವಷ್ಟೇ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು, ಇದೀಗ ಮೈಸೂರು ಬಿಟ್ಟು ಎಲ್ಲೂ ತೆರಳದಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ. ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬೇಡಿ. ತೀರಾ ತುರ್ತು ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿ […]

PM Modi : 450 ಪೊಲೀಸರಿಗೆ ಭೋಜನ ಕೂಟ ಆಯೋಜಿಸಿದ ಪ್ರಧಾನಿ ಮೋದಿ

ನವದೆಹಲಿ: ಜಿ 20 ಶೃಂಗಸಭೆಯನ್ನು ಯಶಸ್ವಿಗೊಳಿಸಲು ಭಾಗಿಯಾದ ಪ್ರತಿಯೊಬ್ಬರ ಕೊಡುಗೆಯನ್ನು ಗುರುತಿಸುವ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ದೆಹಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಭೋಜನವನ್ನು ಮಾಡುವ ಸಾಧ್ಯತೆಯಿದೆ. ಕಳೆದ ವಾರಾಂತ್ಯದ ಶೃಂಗಸಭೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಕಾನ್‌ಸ್ಟೆಬಲ್‌ಗಳಿಂದ ಇನ್ಸ್‌ಪೆಕ್ಟರ್‌ಗಳವರೆಗೆ – ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಪ್ರತಿ ಜಿಲ್ಲೆಯಿಂದ ಸಿಬ್ಬಂದಿಗಳ ಪಟ್ಟಿಯನ್ನು ಕೇಳಿದ್ದಾರೆ ಎಂದು ಪಡೆಯ ಮೂಲಗಳು ತಿಳಿಸಿವೆ. ಪಟ್ಟಿಯಲ್ಲಿ 450 ಸಿಬ್ಬಂದಿ ಇರಬಹುದೆಂದು ನಿರೀಕ್ಷಿಸಲಾಗಿದೆ, ಅವರು ಅರೋರಾ ಅವರೊಂದಿಗೆ ಜಿ20 […]

Karntaka BJP : ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ : ಬಿಜೆಪಿ

ಬೆಂಗಳೂರು: ಬರ ಪೀಡಿತ ಜಿಲ್ಲೆಗಳ ಘೋಷಣೆ ಹಾಗೂ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವಿಟ್ಟರ್ (ಎಕ್ಸ್)ನಲ್ಲಿ​ ವಾಗ್ದಾಳಿ ನಡೆಸಿದೆ. ಅಲ್ಲದೆ, ಬರ ಪೀಡಿತ ಭೂಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಗ್ರಾಫಿಕ್ ಮಾಡಿ, ‘ಬರ ಗ್ಯಾರಂಟಿ ಸಿಎಂ’ ಎಂದು ಬರೆದು ವ್ಯಂಗ್ಯವಾಡಿದೆ. ‘ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ. ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ’ ಎಂದು ಬರೆದುಕೊಂಡಿದೆ. ಮಂಗಳವಾರ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡದ್ದಕ್ಕೆ ಮಾಜಿ ಸಿಎಂ ಬಸವರಾಜ […]