ಹಾವೇರಿ ಪಟಾಕಿ ಗೋದಾಮು ದುರಂತ: ನಾಲ್ವರ ವಿರುದ್ಧ ಎಫ್​ಐಆರ್​ ದಾಖಲು, ತನಿಖೆಗೆ ಬೊಮ್ಮಾಯಿ ಆಗ್ರಹ

ಹಾವೇರಿ: ಜಿಲ್ಲೆಯ ಆಲದಕಟ್ಟಿ ಬಳಿ ಪಟಾಕಿ (Firecracker) ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್​​ಐಆರ್ (FIR) ದಾಖಲಾಗಿದೆ. ಪಟಾಕಿ ಅಂಗಡಿ ಮಾಲೀಕರಾದ ಕೆ.ಬಿ ಜಯಣ್ಣ, ಸಿ.ಜೆ ವೀರೇಶ್, ವಿಜಯ್ ಯರೇಶೇಮಿ, ಕುಮಾರಪ್ಪ ಸಾತೇನಹಳ್ಳಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯತನದಿಂದ ಯಾವುದೇ ಸುರಕ್ಷತಾ ಕ್ರಮಕೈಗೊಂಡಿಲ್ಲ. ಅಲ್ಲದೇ ಕಾರ್ಮಿಕರಿಗೆ ಯಾವುದೇ ಸುರಕ್ಷತೆ ಒದಗಿಸದ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸಿದೆ ಎಂದು ಮೃತ ಕಾರ್ಮಿಕ ದ್ಯಾಮಪ್ಪ ಓಲೇಕಾರ ಸಂಬಂಧಿಕ ಕಾಟೇನಹಳ್ಳಿ ಗ್ರಾಮದ ದುರಗಪ್ಪ ಓಲೆಕಾರ್ […]

‘ಗೃಹಲಕ್ಷ್ಮಿ’ಗೆ ಚಾಲನೆ ನೀಡಲು ರಾಜ್ಯಕ್ಕೆ ಇಂದು ರಾಹುಲ್ ಆಗಮನ

ಬೆಂಗಳೂರು : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮೀ’ ಯೋಜನೆಗೆ ಚಾಲನೆ ನೀಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ದೆಹಲಿಯಿಂದ ಹೊರಡಲಿರುವ ಅವರು, ಖಾಸಗಿ ವಿಮಾನದಲ್ಲಿ 10:50ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಅಲ್ಲಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಮೈಸೂರನ ಮಂಡಕಳ್ಳಿ ವಿಮಾನ ನಿಲ್ದಾಣ ಬೆಳಗ್ಗೆ 11:40 ಕ್ಕೆ ತಲುಪಲಿದ್ದಾರೆ. ನಂತರ ಅಲ್ಲಿಂದ ರಸ್ತೆ ಮೂಲಕ ಮಹಾರಾಜ ಕಾಲೇಜ್ ಕಾಲೇಜು ಮೈದಾನ ತಲುಪಲಿದ್ದಾರೆ. […]

ಬಿಜೆಪಿ ವಿಪಕ್ಷ ನಾಯಕನ ಹೆಸರು ಬಹುತೇಕ ಫೈನಲ್?

ಬೆಂಗಳೂರು : ವಿಧಾನಸಭೆ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ, ವಿಪಕ್ಷ ನಾಯಕನನ್ನು ಆಯ್ಕೆ ಮಾಡದೆ ರಾಜ್ಯ ಬಿಜೆಪಿ ತೀವ್ರ ಮುಖಭಂಗ ಎದುರಿಸಿತ್ತು. ಇದೀಗ ಹೈಕಮಾಂಡ್ ನಾಯಕರು ಅಳೆದು ತೂಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಒಬ್ಬರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ವಿಪಕ್ಷ ನಾಯಕ ಸ್ಥಾನದ ರೇಸ್ ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರ್. ಅಶೋಕ್, ಅಶ್ವಥ ನಾರಾಯಣ, ವಿ. ಸೋಮಣ್ಣ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದರು. ಈ ಪೈಕಿ […]

ಗೊಲ್ಲರಹಟ್ಟಿಯಲ್ಲಿ ಮರುಕಳಿಸಿದ ಮೌಢ್ಯಾಚರಣೆ… ಊರಿಂದ ಹೊರಗೆ ಗುಡಿಸಲಲ್ಲಿ ಇರಿಸಿದ್ದ ಬಾಣಂತಿ, ಶಿಶು ರಕ್ಷಿಸಿದ ಜಡ್ಜ್​!​

ತುಮಕೂರು: ಮೂಢನಂಬಿಕೆ ಪಾಲಿಸಲು ಬಾಣಂತಿ ಹಾಗೂ ಶಿಶುವನ್ನು ಊರಿನಿಂದ ಹೊರಗಿಟ್ಟಾಗ ಜಿಲ್ಲೆಯ ಗೊಲ್ಲರಹಟ್ಟಿ ಸಮೀಪ ಮಗು ಮೃತಪಟ್ಟು ಬಾಣಂತಿ ನರಳಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಬ್ಬ ಬಾಣಂತಿಯನ್ನು ಗ್ರಾಮದಿಂದ ಹೊರಗಿಡಲಾಗಿದ್ದು, ನ್ಯಾಯಾಧೀಶರು ಮಧ್ಯಪ್ರವೇಶಿಸಿ ಮೌಢ್ಯಾಚರಣೆಗೆ ತಡೆಯೊಡ್ಡಿದ ಘಟನೆ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಬಾಣಂತಿಯನ್ನು ಹೊರಗಿಟ್ಟಿರುವ ಬಗ್ಗೆ ಬುಧವಾರ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಅವರು […]

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್​ ಇಳಿಸಿದ ಇಸ್ರೋಗೆ ವಿಶ್ವದಮೆಚ್ಚುಗೆ

ಶತಮಾನಗಳಿಂದ ಬೆಳಕನ್ನೆ ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-3 ನೌಕೆಯ ಲ್ಯಾಂಡರ್​ ಅನ್ನು ಯಶಸ್ವಿಯಾಗಿ ಇಳಿಸಿದ ಭಾರತವನ್ನೀಗ ವಿಶ್ವವೇ ಹಾಡಿ ಹೊಗಳುತ್ತಿದೆ. ಬಾಹ್ಯಾಕಾಶ ಯಾನದಲ್ಲಿ ಸಾಧಿಸಿದ ವಿಕ್ರಮವನ್ನು ಅಮೆರಿಕದ ನಾಸಾ, ರಷ್ಯಾ, ಫ್ರಾನ್ಸ್​, ಇಂಗ್ಲೆಂಡ್​ ಸೇರಿದಂತೆ ವಿವಿಧ ದೇಶಗಳು ಮೆಚ್ಚಿಕೊಂಡು ‘ಭಲೇ ಭಾರತ’ ಎಂದಿವೆ. ಇಂಗ್ಲೆಂಡ್​ ಸಂಸತ್​ ಸದಸ್ಯ ಲಾರ್ಡ್ ರಾಮಿ ರೇಂಜರ್ ಕೂಡ ಭಾರತದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗೆ ಅಭಿನಂದಿಸಿದ್ದಾರೆ. ಚಂದ್ರನ ಮೇಲೆ ಯಾವುದೇ ದೇಶ ಮಾಡದ ಸಾಧನೆಯನ್ನು ಭಾತರ ಮಾಡಿ, ಇತಿಹಾಸ ನಿರ್ಮಿಸಿದೆ ಎಂದು […]

ಚಂದ್ರಯಾನ-3 : ದಕ್ಷಿಣ ಆಫ್ರಿಕಾದಿಂದಲೇ ಪಿಎಂ ಮೋದಿ ವೀಕ್ಷಣೆ

ನವದೆಹಲಿ : ಇಂದು ಐತಿಹಾಸಿಕ ಚಂದ್ರಯಾನ-3 ಚಂದ್ರನ ಗುರುತೇ ಇರದಂತಹ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ, ಪ್ರಧಾನಿ ನರೇಂದ್ರ ಮೋದಿ ಅವರು 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಮೂರು ದಿನಗಳ ಅಧಿಕೃತ ಭೇಟಿಯಲ್ಲಿರುವ ದಕ್ಷಿಣ ಆಫ್ರಿಕಾದಿಂದ ಲ್ಯಾಂಡಿಂಗ್ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಿದ್ದಾರೆ. ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ (LM) – ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ – ಇಂದು ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವದ ಬಳಿ ಸ್ಪರ್ಶಿಸಲಿದೆ. ಅದೇ ಸಾಧನೆಯನ್ನು ಮಾಡಲು ರಷ್ಯಾದ […]

ಕಾವೇರಿ ಜಲ ವಿವಾದ: ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ಆರಂಭ; ಕೇಂದ್ರ ಸಚಿವರು ಗೈರು

ಬೆಂಗಳೂರು: ಕಾವೇರಿ ನದಿ ನೀರು ವಿವಾದ ಕುರಿತು ಚರ್ಚಿಸಲು ಇಂದು(ಬುಧವಾರ) ಬೆಂಗಳೂರಿನ ವಿಧಾನಸೌಧದಲ್ಲಿ ಕರೆದಿದ್ದ ಸರ್ವಪಕ್ಷ ಸಭೆ ಆರಂಭವಾಗಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ. ಮಳೆ ಕೊರತೆ ಇದ್ದರೂ ತನಗೆ ಬಾಕಿ ಇರುವ ನೀರನ್ನು ಬಿಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ ಮೊರೆ ಹೋಗಿರುವ ಕಾರಣ ರಾಜ್ಯ […]

ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ನೇರ ಪ್ರಸಾರ, ಕನ್ನಡದಲ್ಲೇ ವಿವರಣೆ

ಬೆಂಗಳೂರು, (ಆಗಸ್ಟ್ 23): ಸೌರಮಂಡಲದಲ್ಲಿ ಅದೊಂದು ಅಮೂಲ್ಯವಾದ ಸಂಪನ್ಮೂಲ.. ಆಕರ್ಷಕ.. ನಿಗೂಢ.. ಕುಳಿಗಳೇ ತುಂಬಿರೋ ಸುಂದರ ಚಂದಮಾಮನ ಅಂಗಳದಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ. ಇಸ್ರೋ ವಿಜ್ಞಾನಿಗಳ 4 ವರ್ಷದ ಕನಸು,  4 ಲಕ್ಷ ಕಿಲೋ ಮೀಟರ್ ಪ್ರಯಾಣ. ಬಾಹ್ಯಾಕಾಶದಲ್ಲಿ ಐತಿಹಾಸಕ ಮೈಲಿಗಲ್ಲು ಸಾಧಿಸುವುದಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.  ಇಂದು(ಆಗಸ್ಟ್ 23) ಸಂಜೆ 6ಗಂಟೆ 4 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆಗುತ್ತಿದ್ದು, ಆ ಕೌತುಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೆಲ ಗಂಟೆಗಳಷ್ಟೇ ಬಾಕಿ […]

ಕೆಆರ್‌ಎಸ್‌ ಡ್ಯಾಂ: ವಾರದಲ್ಲಿ 7 ಟಿಎಂಸಿ ನೀರು ಖಾಲಿ; ಮಂಡ್ಯ ರೈತರಲ್ಲಿ ಆತಂಕ!

ಮಂಡ್ಯ: ಜಿಲ್ಲೆಯ ಕೃಷ್ಣರಾಜ ಸಾಗರ (KRS) ಡ್ಯಾಂನಿಂದ ಒಂದೇ ವಾರದಲ್ಲಿ ಏಳು ಟಿಎಂಸಿ ನೀರು ಖಾಲಿಯಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಮೇರೆಗೆ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಮಂಡ್ಯ ಜಿಲ್ಲೆಯ ರೈತರು ಬೆಳೆ ಒಣಗುವ ಆತಂಕಕ್ಕೆ ಒಳಗಾಗಿದ್ದಾರೆ. ಪಶ್ಚಿಮಘಟ್ಟದಲ್ಲಿ ಮುಂಗಾರು ಕೊರತೆಯಿಂದಾಗಿ KRS ನೀರಿನ ಒಳಹರಿವು ದಿನೇದಿನೆ ಕುಸಿತ ಕಾಣುತ್ತಿದೆ. ನೀರಿನ ಕೊರತೆ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲೇ ಡ್ಯಾಂ ಬರಿದಾಗುವ ಆತಂಕ ಎದುರಾಗಿದೆ. ಕಳೆದ ಬುಧವಾರ ಕೆಆರ್‌ಎಸ್‌ […]

Naga Panchami : ರಾಜ್ಯದೆಲ್ಲೆಡೆ ನಾಗರ ಪಂಚಮಿ ಸಂಭ್ರಮ, ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದ ನಾರಿಯರು

ಬೆಂಗಳೂರು, ಆ.21: ಇಂದು ರಾಜ್ಯಾದ್ಯಂತ ನಾಗರ ಪಂಚಮಿ (Naga Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ನಾಗಾರ ಪಂಚಮಿ ಸಾಲು-ಸಾಲು ಹಬ್ಬಗಳನ್ನು ಹೊತ್ತು ತರುತ್ತೆ. ಈ ಹಬ್ಬದ ಬಳಿಕ ವರಮಹಾಲಕ್ಷ್ಮಿ ಹಬ್ಬ(Varamahalakshmi Festival), ರಕ್ಷಾ ಬಂಧನ(Raksha Bandhan), ಕೃಷ್ಣ ಜನ್ಮಾಷ್ಟಮಿ(Krishna Janmashtami), ಗಣೇಶ ಚತುರ್ಥಿ(Ganesha Chaturthi), ದಸರಾ(Dasara), ದೀಪಾವಳಿ(Deepavali) ಹೀಗೆ ಹಲವು ಹಬ್ಬಗಳು […]