ಇಂದು ಬಿಜೆಪಿ ಕೋರ್ ಕಮಿಟಿ ಸಭೆ!

ಬೆಂಗಳೂರು: ಬಿಜೆಪಿ ಹಲವು ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿ ಪಕ್ಷಕ್ಕೆ ಸೆಳೆಯುವ ತಂತ್ರ ರೂಪಿಸಿರುವ ನಡುವೆ ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಿಗದಿಯಾಗಿದೆ. ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಈ ಸಭೆ ನಡೆಯಲಿದ್ದು, ಹತ್ತಾರು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಜೊತೆಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟಕ್ಕೆ ಮುಂದಾಗಿದ್ದು, ಈ ಕುರಿತ ಸಿದ್ಧತೆ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಿದೆ. ಇದಲ್ಲದೆ ಲೋಕಸಭೆ ಚುನಾವಣೆಗೂ ಮುನ್ನ ಕೈಗೊಳ್ಳಬೇಕಾದ ಕಾರ್ಯಗಳು, ಕಾವೇರಿ ನೀರು ಬಿಡುಗಡೆ ಸಂಬಂಧ ಕಾಂಗ್ರೆಸ್ ವಿರುದ್ಧದ ಹೋರಾಟ, […]
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ

ಬೆಂಗಳೂರು : ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಪ್ರಮುಖವಾಗಿ ಈ ಕೆಳಗಿನ ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಚುನಾವಣಾ ಫಲಿತಾಂಶ ಬುಡಮೇಲು ಯತ್ನ ಪ್ರಕರಣ: ಮುಂದಿನ ವಾರ ಟ್ರಂಪ್ ಶರಣಾಗುವ ನಿರೀಕ್ಷೆ

ವಾಷಿಂಗ್ಟನ್ ಡಿಸಿ (ಅಮೆರಿಕ) : ಜಾರ್ಜಿಯಾದಲ್ಲಿ 2020ರ ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಯುಕ್ತ ಸಂಸ್ಥಾನದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಫುಲ್ಟನ್ ಕೌಂಟಿ ಜೈಲಿಗೆ ಶರಣಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಡೊನಾಲ್ಡ್ ಟ್ರಂಪ್ ಮತ್ತು ಇತರ 18 ಆರೋಪಿಗಳು 2020 ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಜಾರ್ಜಿಯಾದ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡುವಂತೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ […]
Kirik Keerthi: ಕರಿಮಣಿ ಮಾಲೀಕ ನಾನಲ್ಲ! ಪ್ರೀತಿಸಿ ಮದುವೆಯಾದ ಪತ್ನಿ ಅರ್ಪಿತಾಗೆ ಡಿವೋರ್ಸ್ ನೀಡಿದ ಕಿರಿಕ್ ಕೀರ್ತಿ

Kirik Keerthi: ಪತ್ರಕರ್ತ, ನಿರೂಪಕ, ಬಿಗ್ಬಾಸ್ ಕನ್ನಡದ ಸ್ಪರ್ಧಿ, ಸಿನಿಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಿರಿಕ್ ಕೀರ್ತಿ, ತಮ್ಮ ದಾಂಪತ್ಯದ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪತ್ನಿ ಅರ್ಪಿತಾ ಜತೆಗೆ ವಿಚ್ಛೇದನ ಪಡೆದಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆಯೇ ಕಿರಿಕ್ ಕೀರ್ತಿ ಮತ್ತು ಅರ್ಪಿತಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಕೀರ್ತಿ ಬಂದಿದ್ದರಂತೆ. ಆಗ ಕೇಳಿ ಬಂದ ವದಂತಿಗೆ ಕೀರ್ತಿ […]
16-18 ವರ್ಷ ವಯಸ್ಸಿನವರ ನಡುವಣ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಮಾಡಬಹುದೇ? ಕೇಂದ್ರದ ಅಭಿಪ್ರಾಯ ಕೇಳಿದ ಸುಪ್ರೀಂ

ದೆಹಲಿ, ಆ.19: 16 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರು ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ( Consensual sex) ತೊಡಗಿಕೊಂಡಿದ್ದರೆ, ಅದನ್ನು ಅತ್ಯಾಚಾರದ ಅಪರಾಧ ಎಂದು ಹೇಳುವ ಕಾನೂನನ್ನು ಅಮಾನ್ಯಗೊಳಿಸುವ ನಿರ್ದೇಶನವನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುವ ವೇಳೆ, ಈ ಬಗ್ಗೆ ಕೇಂದ್ರ ಅಭಿಪ್ರಾಯ ಏನು? ಎಂಬುದನ್ನು ಕೂಡ ಕೇಳಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರದ ಅಭಿಪ್ರಾಯ ಕೇಳಿದ್ದು, ಸರ್ಕಾರ ಸೇರಿದಂತೆ ಕೆಲವು ಶಾಸನಬದ್ಧ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯ […]
ಬಿಜೆಪಿ ವರಿಷ್ಠರ ಜತೆ ಮುನಿಸು; ಬಿಎಸ್ವೈ ನೇತೃತ್ವದ ಸಭೆಗೆ ಶಾಸಕ ಎಸ್ಟಿಎಸ್ ಗೈರು!

ಡಿಜಿಟಲ್ ಡೆಸ್ಕ್: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ವರಿಷ್ಠರ ಜತೆಗಿನ ಮುನಿಸಿನ ಕಾರಣಕ್ಕೆ ಮತ್ತೆ ತಮ್ಮ ಮಾತೃ ಪಕ್ಷವಾದ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಪಕ್ಷದ ವೇದಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಸೋಮಶೇಖರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ರಾತ್ರಿ ಕರೆದಿದ್ದ ‘ಮುಂಬೈ ಮಿತ್ರ ಮಂಡಳಿ’ ಸಭೆಗೂ ಗೈರಾಗಿ ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಂಬೈ […]
Gruha Jyothi Scheme: ಗೃಹಜ್ಯೋತಿ ಯೋಜನೆಯ ಲಾಭ ಪಡೆದವರೆಷ್ಟು, ವಂಚಿತರಾದವರೆಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು, ಆಗಸ್ಟ್ 18: ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನ ಮಹತ್ವದ ಗೃಹ ಜ್ಯೋತಿ ಯೋಜನೆ (Gruha Jyothi Scheme) ಜಾರಿ ಮಾಡಿ ಒಂದು ತಿಂಗಳಾಗಿದೆ. ಲಕ್ಷಾಂತರ ಗ್ರಾಹಕರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ಒಂದಷ್ಟು ನೋಂದಾಯಿತ ಗ್ರಾಹಕರು ನಿಗದಿತ ಮಿತಿಗಿಂದ ಹೆಚ್ಚುವರಿ ಯುನಿಟ್ ವಿದ್ಯುತ್ ಬಳಕೆ ಮಾಡಿ ಉಚಿತ ವಿದ್ಯುತ್ ಲಾಭ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಹಾಗಿದ್ದರೆ, ಈ ಯೋಜನೆಯ ಲಾಭ ಪಡೆದವರೆಷ್ಟು? ವಂಚಿತರಾದ ನೋಂದಾಯಿತ ಜನರೆಷ್ಟು? ಇಲ್ಲಿದೆ ಮಾಹಿತಿ. ಗೃಹಜ್ಯೋತಿ ಯೋಜನೆಗೆ 1,40,31,320 ಗ್ರಾಹಕರು ಅರ್ಜಿ […]
CPL 2023: ರಿಸ್ಕಿ ರನ್ ಗಾಗಿ ವಿಕೆಟ್ ಒಪ್ಪಿಸಿದ ವಿಶ್ವದ ದೈತ್ಯ ಆಟಗಾರ; ಮುಳುವಾಗಿದ್ದು ದೇಹದ ತೂಕ!

ಬಾರ್ಬೊಡಾಸ್: ಕೆರಿಬಿಯನ್ ಪ್ರೀಮಿಯರ್ ಲೀಗ್ ಸಿಪಿಎಲ್ 2023ಯಲ್ಲಿ ವಿಶ್ವದ ದೈತ್ಯ ಮತ್ತು ‘ತೂಕದ ಆಟಗಾರ’ ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಕ್ಹೀಮ್ ಕಾರ್ನ್ವಾಲ್ ರಿಸ್ಕಿ ರನ್ ಗಾಗಿ ಓಡಿ ಶೂನ್ಯಕ್ಕೆ ಔಟಾಗಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ವೃತ್ತಿಪರ ಕ್ರಿಕೆಟ್ನಲ್ಲಿ ‘ಭಾರಿ’ ಆಟಗಾರ ಎಂದು ಖ್ಯಾತಿ ಪಡೆದಿರುವ ರಕ್ಹೀಮ್ ಕಾರ್ನ್ವಾಲ್ ಅವರು ಮೈದಾನಕ್ಕೆ ಬಂದಾಗಲೆಲ್ಲಾ ತಮ್ಮ ತೂಕದಿಂದಲೇ ಅಭಿಮಾನಿಗಳ ಗಮನವನ್ನು ಸೆಳೆಯುವ ವ್ಯಕ್ತಿ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2023 ರಲ್ಲಿ ಬಾರ್ಬಡೋಸ್ ರಾಯಲ್ಸ್ ಪರ […]
Dutee Chand: ಉದ್ದೀಪನ ಮದ್ದು ಸೇವನೆ ಸಾಬೀತು; ವೇಗದ ಓಟಗಾರ್ತಿ ದ್ಯುತಿ ಚಂದ್ಗೆ 4 ವರ್ಷ ನಿಷೇಧ

Dutee Chand: ಭಾರತದ ವೇಗದ ಓಟಗಾರ್ತಿ ದ್ಯುತಿ ಚಂದ್, ಉದ್ದೀಪನ ಮದ್ದು ಸೇವನೆ ಮಾಡಿದ ಕಾರಣ ಅವರನ್ನು 4 ವರ್ಷಗಳ ನಿಷೇಧ ಮಾಡಲಾಗಿದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪರಿಣಾಮ ಭಾರತದ ಸ್ಟಾರ್ ವೇಗ ಓಟಗಾರ್ತಿ ದ್ಯುತಿ ಚಂದ್ (Dutee Chand) 4 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ. ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯು ಈ ಶಿಕ್ಷೆ ವಿಧಿಸಿದೆ. ಇದರೊಂದಿಗೆ ಮುಂದಿನ ತಿಂಗಳು ನಡೆಯುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಭಗ್ನಗೊಂಡಿದೆ. 2022ರ […]
ಪಾಕಿಸ್ತಾನದಲ್ಲಿ ಚೀನಾ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ದಾಳಿ

ವದಾರ್: ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಈಗ ಚೀನಾ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಲಾಗಿದೆ. ಗ್ವದಾರ್ ನ ಪೊಲೀಸ್ ಠಾಣೆಯ ಬಳಿ ಭಾನುವಾರದಂದು ಈ ಘಟನೆ ವರದಿಯಾಗಿದೆ. ಬೆಂಗಾವಲು ಪಡೆಯ 3 ಎಸ್ ಯುವಿ ಹಾಗೂ ವ್ಯಾನ್ ಗಳು ಗುಂಡು ನಿರೋಧಕ ವಾಹನಗಳಾಗಿದ್ದು ಇದರಲ್ಲಿ ಚೀನಾದ 23 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು ದಾಳಿಯ ಸಮಯದಲ್ಲಿ ಐಇಡಿ ಸ್ಫೋಟಗೊಂಡಿದ್ದು ವ್ಯಾನ್ಗೆ ಗುಂಡು ಹಾರಿಸಲಾಗಿದೆ. ದಾಳಿಯ ಪರಿಣಾಮ ಗಾಜಿನಲ್ಲಿ ಬಿರುಕುಗಳುಂಟಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ […]