ಬೆಂಗಳೂರು: ಈ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲ. ಆ ರಕ್ಷಣೆ ಕೊಡೋದಕ್ಕೆ ಯೋಗ್ಯತೆ ಇಲ್ಲದಿದ್ದರೆ ಈ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಆಡಳಿತ, ದುರಾಡಳಿತ ಮತ್ತು ಭ್ರμÁ್ಟಚಾರಗಳ ವಿರುದ್ಧ ಧ್ವನಿ ಎತ್ತಿದ್ದ ಒಬ್ಬ ಮಾದಿಗ ಕಾರ್ಯಕರ್ತನನ್ನು ನಡುಬೀದಿಯಲ್ಲಿ ಕೊಲೆ ಮಾಡಲಾಗಿದೆ. ಜನ ನೋಡಲಿ ಅಂತ ಬಿಟ್ಟುಹೋಗಿದ್ದಾರೆ. ಕೇವಲ ಎಫ್ಐಆರ್ ಆಗಿದ್ದು, ಒಬ್ಬನನ್ನಷ್ಟೇ ಬಂಧಿಸಲಾಗಿದೆ. ಮತ್ತೆ ಯಾರನ್ನು ಬಂಧಿಸಿಲ್ಲ. ಕಲ್ಬುರ್ಗಿಯಲ್ಲಿ ಮತ್ತೊಬ್ಬ ಹುಡುಗ ಕೊಲೆ ಆಗಿದ್ದಾನೆ. ಮತ್ತೊಂದು ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ರಾಯಚೂರಿನ ಸಿರವಾರದಲ್ಲಿ ಮತ್ತೊಂದು ಕೊಲೆ ನಡೆದಿದೆ.
ಲಿಂಗಸುಗೂರಲ್ಲೂ ಮಹಿಳೆ ಕೊಲೆ ಆಗಿದೆ. ಮಾನ್ವಿಯಲ್ಲಿ ವ್ಯಕ್ತಿಯ ಕೊಲೆ ಆಗಿದೆ. ಆಗಸ್ಟ್ನಲ್ಲಿ ಇಂಥ ಹಲವಾರು ಘಟನೆಗಳು ನಡೆದಿವೆ ಎಂದು ದೂರಿದರು. ರಾಜ್ಯ ಸರ್ಕಾರ ಮೌನವಾಗಿದೆ. ಈ ರಾಜ್ಯದ ಗೃಹ ಸಚಿವರು ಈ ಬಗ್ಗೆ ಗಮನ ಹರಿಸಿಲ್ಲ. ಡಿ.ಜಿ ಸಭೆಯನ್ನು ಕರೆಯುವುದಿಲ್ಲ ಎಂದು ಟೀಕಿಸಿದರು.
ಲಿಂಗಸುಗೂರಿನಲ್ಲಿ ಹೋಟೆಲ್ನಲ್ಲಿ ಚಹಾ ಸೇವಿಸಲು ವಿರೋಧ ಸೂಚಿಸಲಾಗಿದೆ. ಟಿ ನರಸೀಪುರದಲ್ಲಿ ಯೂಟ್ಯೂಬರ್ ಮಂಜುನಾಥ್ ಮೇಲೆ ಸಬ್ ಇನ್ಸ್ಪೆಕ್ಟರ್ ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಮೈಸೂರಿನ ನಂಜನಗೂಡಿನಲ್ಲಿ ಮಹಾದೇವಮ್ಮ ಎಂಬವರ ಕೊಲೆ ವಿಚಿತ್ರವಾದುದು. ಈ ಸಂಬಂಧ ಎಫ್ಐಆರ್ ಮಾಡಿಲ್ಲ ಎಂದು ಟೀಕಿಸಿದರು.
ಈ ರಾಜ್ಯದಲ್ಲಿ 2023ರಿಂದ 26ರವರೆಗೆ ಎμÉ್ಟಷ್ಟು ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂಬ ಮಾಹಿತಿ ಈ ರಾಜ್ಯದ ಗೃಹ ಸಚಿವರಿಗೆ ಇಲ್ಲ. ಗೃಹ ಸಚಿವರು ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸಂಬಂಧಿಸಿ ಆಯೋಗ ಇದ್ದು, ಮೂರ್ತಿಯವರು ಅದರ ಅಧ್ಯಕ್ಷರಾಗಿದ್ದಾರೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಆಕ್ಷೇಪಿಸಿದರು.
ತಮಗೆ ಬಾಕಿ ಇರುವ 35 ಸಾವಿರ ಕೋಟಿ ಕೊಡದಿದ್ದರೆ ಈ ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಒತ್ತಾಯಿಸುವ ಶೇ 70 ಶಾಸಕರ ಪಸೆರ್ಂಟೇಜ್ ಮಾಹಿತಿ ಬಹಿರಂಗಪಡಿಸುವುದಾಗಿ ಗುತ್ತಿಗೆದಾರರು ಹೇಳುತ್ತಿದ್ದಾರೆ. ಆ ಮಾಹಿತಿ ಬಹಿರಂಗಪಡಿಸಲು ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಸೂಚಿಸಬೇಕು ಎಂದು ಒತ್ತಾಯಿಸಿದರು.
ಡಿಸಿಎಂ, ನಗರಾಭಿವೃದ್ಧಿ ಸಚಿವರಾಗಿದ್ದ ರಾಜ್ಯದ ಮುಖ್ಯಮಂತ್ರಿಗಳಿಗೆ ಆಡಳಿತ ಮಾಡುವ ಅನುಭವ ಇಲ್ಲ ಎಂದು ಆಕ್ಷೇಪಿಸಿದರು.
ಕಾನೂನು- ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು. ಸರಕಾರ ದಿವಾಳಿ ಆಗಿದೆ. ಅನೇಕ ಯೋಜನೆಗಳು ಬಾಕಿ ಇವೆ. ಶೇ 98 ಫಲಿತಾಂಶ ಬರುವ ಶಾಲೆಗಳ ಮಕ್ಕಳಿಗೆ ಸಾಬೂನು, ಟೂತ್ಪೇಸ್ಟ್ ನೀಡುತ್ತಿಲ್ಲ. ಶಿಕ್ಷಕರನ್ನು ನೇಮಿಸುತ್ತಿಲ್ಲ. ಪ್ರಾಂಶುಪಾಲರಿಗೆ ಸಂಬಳ ಕೊಡುತ್ತಿಲ್ಲ ಎಂದು ಟೀಕಿಸಿದರು. ಅನೇಕ ನಿಗಮಗಳು ಹಣವಿಲ್ಲದೆ ಸೊರಗುತ್ತಿವೆ ಎಂದು ಗಮನ ಸೆಳೆದರು.
ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಭಾಗವಹಿಸಿದ್ದರು.

