KRGRV
Saturday, October 3, 2026
Homeರಾಜ್ಯರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ; ಹೋರಾಟದ ಹೆಸರಿನಲ್ಲಿ ವೈಯಕ್ತಿಕ ನಿಂದನೆ ಸಲ್ಲದು: ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ; ಹೋರಾಟದ ಹೆಸರಿನಲ್ಲಿ ವೈಯಕ್ತಿಕ ನಿಂದನೆ ಸಲ್ಲದು: ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಬೆಂಗಳೂರು: ಧಾರವಾಡ ಮತ್ತು ಹುಬ್ಬಳ್ಳಿ ಭಾಗದಲ್ಲಿ ಕಬ್ಬು ಬೆಳೆಗಾರ ರೈತರ ಹೋರಾಟ ಆರಂಭವಾಗಿದೆ. ಪ್ರತಿವರ್ಷ ಕಬ್ಬು ಕಟಾವಿನ ಸಂದರ್ಭದಲ್ಲಿ ರೈತರು ತಮ್ಮ ಬೆಳೆ, ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಾಗೂ ನ್ಯಾಯಯುತ ಬೆಲೆಯ ಕುರಿತು ಸರ್ಕಾರದ ಗಮನ ಸೆಳೆಯುವುದು ಸಹಜ. ರೈತರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುವುದು ಅವರ ಹಕ್ಕು. ಅವರ ಹೋರಾಟವನ್ನು ನಾವು ಗೌರವಿಸುತ್ತೇವೆ ಮತ್ತು ರೈತರ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಇಂದು ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬರ, ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಅನೇಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಬ್ಬಿನ ಗದ್ದೆಗಳೇ ಒಣಗುತ್ತಿರುವ ಪರಿಸ್ಥಿತಿಯನ್ನು ನಾನು ಹಲವು ಭಾಗಗಳಲ್ಲಿ ಸ್ವತಃ ನೋಡಿದ್ದೇನೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.

ಒಂದು ಎಕರೆಗೆ ₹25,000 ಪರಿಹಾರ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆದರೆ ಕೇವಲ ₹2,500 ಪರಿಹಾರ ನೀಡಿ ಸರ್ಕಾರ ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಅಸಮಾಧಾನ ರೈತರಲ್ಲಿದೆ. ಈ ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿ ರೈತರೇ ಸರ್ಕಾರಕ್ಕೆ ತಮ್ಮದೇ ಹಣದ ಚೆಕ್‍ಗಳು ಮತ್ತು ಡಿಡಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದು ರೈತರ ಸಂಕಷ್ಟದ ಗಂಭೀರತೆಯನ್ನು ತೋರಿಸುತ್ತದೆ.

ಕಬ್ಬು ಬೆಳೆಗಾರರು ಮಾತ್ರವಲ್ಲ, ರಾಜ್ಯದ ಅನೇಕ ಭಾಗಗಳ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಸಮಗ್ರ ಬೆಳೆನಷ್ಟದ ಅಂದಾಜು ಮಾಡಿ ಪರಿಹಾರ ಘೋಷಿಸಬೇಕು. ಕೇಂದ್ರ ಸರ್ಕಾರದ ತಂಡಗಳು ಈಗಾಗಲೇ ಪರಿಶೀಲನೆಗಾಗಿ ಬಂದಿದ್ದು, ಅವುಗಳು ಶೀಘ್ರವಾಗಿ ವರದಿ ಸಲ್ಲಿಸಿ ರೈತರಿಗೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು.
ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ಹೋರಾಟ: ಬೇಡಿಕೆ ಕೇಳಿ, ಆದರೆ ಕುಟುಂಬವನ್ನು ಗುರಿಯಾಗಿಸಬೇಡಿ, ಸನ್ಮಾನ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ರೈತರ ಹೋರಾಟ ನಡೆದಿರುವ ಕುರಿತು ನಾನು ಹೇಳುವುದೇನೆಂದರೆ—ಕೇಂದ್ರ ಸಚಿವರನ್ನು ರೈತರು ತಮ್ಮ ಸಮಸ್ಯೆಗಳ ಕುರಿತು ಪ್ರಶ್ನಿಸುವುದರಲ್ಲಿ ತಪ್ಪಿಲ್ಲ. ಅವರು ತಮ್ಮ ಬೇಡಿಕೆಗಳನ್ನು ಸಚಿವರ ಮುಂದೆ ಇಡಬಹುದು. ಸಚಿವರೂ ರೈತರ ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಕೇಂದ್ರ ಮತ್ತು ರಾಜ್ಯ ಇಲಾಖೆಗಳೊಂದಿಗೆ ಪರಿಹಾರದ ದಾರಿ ಕಂಡುಕೊಳ್ಳಬೇಕು.

ನಾವೂ ರೈತರ ಪರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ರೈತರ ಹೋರಾಟವನ್ನು ಗೌರವಿಸಿ, ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ.
ಆದರೆ ಹೋರಾಟ ಒಂದು ವಿಚಾರ; ವ್ಯಕ್ತಿಯ ಕುಟುಂಬವನ್ನು ನಿಂದಿಸುವುದು ಮತ್ತೊಂದು ವಿಚಾರ. ರಾಜಕೀಯ ಹೋರಾಟವಾಗಲಿ, ರೈತರ ಹೋರಾಟವಾಗಲಿ—ಅದು ನೀತಿ, ಆಡಳಿತ ಮತ್ತು ಬೇಡಿಕೆಗಳಿಗೆ ಸೀಮಿತವಾಗಿರಬೇಕು. ಹೋರಾಟದ ನೆಪದಲ್ಲಿ ಕೇಂದ್ರ ಸಚಿವರ ಹೆಂಡತಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ನಿಂದಿಸುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗುವುದಿಲ್ಲ.

ಇಂತಹ ಹೇಳಿಕೆಗಳನ್ನು ನೀಡಿರುವವರು ತಕ್ಷಣವೇ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಅವರ ಕುಟುಂಬದವರಲ್ಲಿ ಕ್ಷಮೆಯಾಚಿಸಬೇಕು. ಕಾನೂನು ಉಲ್ಲಂಘನೆಯಾಗಿದ್ದರೆ ಪೆÇಲೀಸ್ ಇಲಾಖೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು. ಹೋರಾಟಕ್ಕೆ ನಮ್ಮ ಬೆಂಬಲವಿದೆ; ಆದರೆ ವೈಯಕ್ತಿಕ ನಿಂದನೆಗೆ ಬೆಂಬಲವಿಲ್ಲ.
ರೈತರ ಸಮಸ್ಯೆ ಪರಿಹರಿಸುವುದು ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳ ಜವಾಬ್ದಾರಿ
ರೈತರ ಸಮಸ್ಯೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗಬಾರದು. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಾಗೂ ಬೆಳೆನಷ್ಟಕ್ಕೆ ಪರಿಹಾರ—ಈ ಮೂರು ವಿಷಯಗಳ ಮೇಲೂ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು.

ರೈತರ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರವೂ ತನ್ನ ವ್ಯಾಪ್ತಿಯಲ್ಲಿರುವ ಕ್ರಮಗಳನ್ನು ವೇಗಗೊಳಿಸಬೇಕು. ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು.
ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಕಾರ್ಯಕ್ರಮ: ಸರ್ಕಾರ ಸ್ಪಷ್ಟನೆ ನೀಡಲಿ
ಇತ್ತೀಚೆಗೆ ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಭಾμÉಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ತೀರ್ಮಾನಿಸಿರುವ ವಿಚಾರವೂ ಸಾರ್ವಜನಿಕ ಚರ್ಚೆಗೆ ಬಂದಿದೆ.

ಯಾವುದೇ ಭಾμÉಯನ್ನು ಕಲಿಯುವುದಕ್ಕೆ ನಮ್ಮ ವಿರೋಧವಿಲ್ಲ. ಶಾಲೆಗಳಲ್ಲಿ ಕನ್ನಡದ ಜೊತೆಗೆ ವಿವಿಧ ಭಾμÉಗಳನ್ನು ಕಲಿಯುವ ಅವಕಾಶವಿದೆ. ಉರ್ದು ಕಲಿಯುವವರಿಗೂ ಯಾವುದೇ ವಿರೋಧವಿಲ್ಲ. ಅದೇ ರೀತಿ ತುಳು ಸೇರಿದಂತೆ ರಾಜ್ಯದ ವಿವಿಧ ಭಾμÉಗಳಿಗೆ ಮಾನ್ಯತೆ ಮತ್ತು ಪೆÇ್ರೀತ್ಸಾಹ ದೊರೆಯುವುದನ್ನೂ ನಾವು ಸ್ವಾಗತಿಸುತ್ತೇವೆ. ಆದರೆ, ಆಡಳಿತದ ಕೇಂದ್ರವಾಗಿರುವ ವಿಧಾನಸೌಧದಂತಹ ಸ್ಥಳದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶ ಮತ್ತು ಸರ್ಕಾರದ ನೀತಿ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದ ಹಿಂದೆ ಯಾವುದೇ ಮತಬ್ಯಾಂಕ್ ರಾಜಕಾರಣದ ಉದ್ದೇಶವಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು.
ಕರ್ನಾಟಕದ ಭಾμÁ ಮತ್ತು ಸಾಂಸ್ಕøತಿಕ ವೈವಿಧ್ಯತೆಯನ್ನು ನಾವು ಗೌರವಿಸುತ್ತೇವೆ. ಆದರೆ ಯಾವುದೇ ಭಾμÉಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಬಾರದು. ಕನ್ನಡದ ನೆಲದಲ್ಲಿ ಎಲ್ಲ ಭಾμÉಗಳಿಗೂ ಗೌರವ ಇರಬೇಕು; ಅದೇ ಸಂದರ್ಭದಲ್ಲಿ ಕನ್ನಡದ ಸ್ಥಾನಮಾನ ಮತ್ತು ರಾಜ್ಯದ ಅಸ್ಮಿತೆಯನ್ನೂ ಸರ್ಕಾರ ಕಾಪಾಡಬೇಕು.

ಮಾನ್ಯ ಸಚಿವರಾದ ಶ್ರೀ ಯು.ಟಿ. ಖಾದರ್ ಅವರ ಕೆಲವು ನಿರ್ಧಾರಗಳು ಮತ್ತು ನಡೆಗಳು ಈಗಾಗಲೇ ಸಾರ್ವಜನಿಕ ಚರ್ಚೆಗೆ ಬಂದಿವೆ. ಸಚಿವ ಸ್ಥಾನವು ಅತ್ಯಂತ ಗೌರವಯುತವಾದುದು. ಆ ಸ್ಥಾನದಲ್ಲಿರುವವರು ಯಾವುದೇ ಪಕ್ಷದ ರಾಜಕೀಯ ಹಿತಾಸಕ್ತಿಗಿಂತ ಸ್ಥಾನದ ಗೌರವ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು.
ವಿಧಾನಸೌಧದಂತಹ ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಎಲ್ಲ ವರ್ಗದ ಜನರಿಗೆ ಸಮಾನ ಗೌರವ ಮತ್ತು ವಿಶ್ವಾಸ ಮೂಡಿಸುವಂತಿರಬೇಕು.

ಸಚಿವರಾಗಿ ತಮ್ಮ ಸ್ಥಾನಮಾನದ ಘನತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಶ್ರೀ ಖಾದರ್ ಅವರ ಮೇಲಿದೆ. ಅವರ ಕೆಲವು ನಡೆಗಳಿಂದ ಕಾಂಗ್ರೆಸ್ ಪಕ್ಷಕ್ಕೂ ರಾಜಕೀಯವಾಗಿ ಹಾನಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಅವರು ಎಚ್ಚರಿಕೆ ವಹಿಸಬೇಕು.

ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಉತ್ತರ
ಕೆಪಿಸಿಸಿ ಅಧ್ಯಕ್ಷರು ವಿರೋಧ ಪಕ್ಷದ ನಾಯಕರ ಬಗ್ಗೆ, ವಿಶೇಷವಾಗಿ ಬಿಜೆಪಿ ನಾಯಕರಾದ ಶ್ರೀ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ.
ಸನ್ಮಾನ್ಯ ಶ್ರೀ ಯಡಿಯೂರಪ್ಪ ಅವರು ಕರ್ನಾಟಕದ ರಾಜಕಾರಣದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಹಿರಿಯ ನಾಯಕರು. ಅವರ ರಾಜಕೀಯ ಕೊಡುಗೆಯನ್ನು ವೈಯಕ್ತಿಕ ಟೀಕೆಗಳ ಮೂಲಕ ಕಡಿಮೆ ಮಾಡುವ ಪ್ರಯತ್ನ ಮಾಡುವುದು ಸೂಕ್ತವಲ್ಲ.

ಹಿರಿಯ ನಾಯಕರನ್ನು ‘ಎಲ್‍ಕೆಜಿ’, ‘ಯುಕೆಜಿ’ ಎಂದು ಹೀಯಾಳಿಸುವ ಬದಲು, ನೀತಿ ಮತ್ತು ಆಡಳಿತದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿ.
ಚುನಾವಣಾ ಸೋಲು-ಗೆಲುವಿನ ಬಗ್ಗೆ ವೈಯಕ್ತಿಕ ವ್ಯಂಗ್ಯ ಮಾಡುವುದಕ್ಕಿಂತ ಜನರ ಸಮಸ್ಯೆಗಳ ಕುರಿತು ಮಾತನಾಡುವುದು ರಾಜಕೀಯ ನಾಯಕರಿಗೆ ಹೆಚ್ಚು ಸೂಕ್ತ.
ಕರ್ನಾಟಕದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ರಾಜಕೀಯ ನಾಯಕರಿಗೆ ಉತ್ತರ ನೀಡುತ್ತಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಒಳಗಿನ ಸಮಸ್ಯೆಗಳನ್ನು ಗುರುತಿಸಿ
ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ಅವರು ನನ್ನ ಆತ್ಮೀಯರು. ವೈಯಕ್ತಿಕವಾಗಿ ನಮಗೆ ಸ್ನೇಹವಿದೆ. ಆದರೆ ರಾಜಕಾರಣದಲ್ಲಿ ಸ್ನೇಹ ಬೇರೆ, ಜನರ ಸಮಸ್ಯೆಗಳ ಬಗ್ಗೆ ನಮ್ಮ ಜವಾಬ್ದಾರಿ ಬೇರೆ.

ಸ್ನೇಹದ ಹೆಸರಿನಲ್ಲಿ ಸರ್ಕಾರದ ತಪ್ಪುಗಳನ್ನು ನಾವು ಸಮರ್ಥಿಸುವುದಿಲ್ಲ. ನಾನು ಯಾವುದೇ ‘ಅಡ್ಜಸ್ಟ್‍ಮೆಂಟ್ ರಾಜಕಾರಣ’ ಮಾಡುವ ವ್ಯಕ್ತಿಯಲ್ಲ. ಜನರ ಪರವಾಗಿ ನೇರವಾಗಿ ಮಾತನಾಡುವುದು ನನ್ನ ರಾಜಕೀಯದ ನಿಲುವು.
ಸನ್ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದೊಳಗಿನಿಂದಲೇ ನಿಮಗೆ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಒತ್ತಡಗಳು ಬರುತ್ತಿವೆ ಎಂಬುದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನಿಮ್ಮ ಸರ್ಕಾರ ಸುಗಮವಾಗಿ ನಡೆಯಬೇಕು, ರಾಜ್ಯಕ್ಕೆ ಉತ್ತಮ ಆಡಳಿತ ದೊರೆಯಬೇಕು ಎಂಬುದು ನಮ್ಮ ಆಶಯ. ಆದರೆ ನಿಮ್ಮ ಪಕ್ಷದ ಆಂತರಿಕ ರಾಜಕೀಯದಿಂದ ಸರ್ಕಾರದ ಆಡಳಿತಕ್ಕೆ ಧಕ್ಕೆಯಾಗಬಾರದು.

ಇತ್ತೀಚೆಗೆ ವೀರಶೈವ-ಲಿಂಗಾಯತ ಸಮಾಜದ ಸ್ವಾಮೀಜಿಗಳ ಕುರಿತು ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಗಳೂ ಚರ್ಚೆಗೆ ಬಂದಿವೆ.
ಸಂತರು, ಸ್ವಾಮೀಜಿಗಳು ಮತ್ತು ಧಾರ್ಮಿಕ ಸಂಸ್ಥೆಗಳ ಕುರಿತು ಮಾತನಾಡುವಾಗ ಅತ್ಯಂತ ಎಚ್ಚರಿಕೆ ಅಗತ್ಯ. ಅವರು ಯಾವುದೇ ಒಂದು ಪಕ್ಷದವರಲ್ಲ; ಸಮಾಜದ ಧಾರ್ಮಿಕ ಮತ್ತು ಸಾಮಾಜಿಕ ಮಾರ್ಗದರ್ಶಕರು.
ಯಾವುದೇ ಸಮಾಜದ ಗುರು-ಹಿರಿಯರು ಮತ್ತು ಸ್ವಾಮೀಜಿಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಮಾತುಗಳನ್ನು ಮುಖ್ಯಮಂತ್ರಿಗಳು ತಪ್ಪಿಸಬೇಕು.

ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ರೀತಿಯ ಹೇಳಿಕೆಗಳು ಬರಬಾರದು. ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಮುಖ್ಯಮಂತ್ರಿಗಳು ತಮ್ಮ ಮಾತುಗಳನ್ನು ಸ್ಪಷ್ಟಪಡಿಸಿ ಅಗತ್ಯವಿದ್ದಲ್ಲಿ ವಿμÁದ ವ್ಯಕ್ತಪಡಿಸುವುದು ಸೂಕ್ತ.
ಇಂದು ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ; ರೈತರ ಸಮಸ್ಯೆಗಳ ಪರಿಹಾರಕ್ಕಾಗಿ, ಜನರ ಹಕ್ಕುಗಳಿಗಾಗಿ ಮತ್ತು ರಾಜ್ಯದ ಹಿತಕ್ಕಾಗಿ.
ರೈತರು ಸಂಕಷ್ಟದಲ್ಲಿದ್ದಾರೆ—ಅವರಿಗೆ ತಕ್ಷಣ ಪರಿಹಾರ ಬೇಕು.
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಮತ್ತು ಬಾಕಿ ಹಣ ಬೇಕು.
ಬೆಳೆನಷ್ಟ ಅನುಭವಿಸಿರುವ ರೈತರಿಗೆ ಸಮರ್ಪಕ ಪರಿಹಾರ ಬೇಕು.
ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ಕರ್ನಾಟಕದ ಹಿತ ಮತ್ತು ಜನರ ಹಿತವೇ ಮೊದಲ ಆದ್ಯತೆಯಾಗಬೇಕು.

ಹೋರಾಟ ಮಾಡುವುದು ಪ್ರತಿಯೊಬ್ಬರ ಪ್ರಜಾಸತ್ತಾತ್ಮಕ ಹಕ್ಕು. ಆದರೆ ಹೋರಾಟ ವಿಚಾರದ ವಿರುದ್ಧವಾಗಿರಲಿ, ವೈಯಕ್ತಿಕ ಬದುಕು ಮತ್ತು ಕುಟುಂಬದ ವಿರುದ್ಧವಾಗಿರಬಾರದು.
ರೈತರ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಮುಂದುವರಿಯುತ್ತದೆ. ಅದೇ ಸಮಯದಲ್ಲಿ ವೈಯಕ್ತಿಕ ನಿಂದನೆ ಮತ್ತು ಕುಟುಂಬವನ್ನು ಗುರಿಯಾಗಿಸುವ ಪ್ರವೃತ್ತಿಯನ್ನು ನಾವು ಸ್ಪಷ್ಟವಾಗಿ ಖಂಡಿಸುತ್ತೇವೆ. ರೈತರ ಪರವಾಗಿ—ಜನರ ಪರವಾಗಿ—ಕರ್ನಾಟಕದ ಹಿತಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ.

ವರದಿ ಸಿದ್ದಪಡಿಸಿಕೋಡಿ

ಹೆಚ್ಚಿನ ಸುದ್ದಿ