KRGRV
Sunday, September 27, 2026
Homeಬೆಂಗಳೂರುಶಿಗ್ಗಾಂವ್ ಶಾಸಕ ಯಾಸಿರ್ ಖಾನ್ ಅಹ್ಮದ್ ಖಾನ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಅಲ್ಪಸಂಖ್ಯಾತರ ವಸತಿ ಶಾಲೆಗಳ...

ಶಿಗ್ಗಾಂವ್ ಶಾಸಕ ಯಾಸಿರ್ ಖಾನ್ ಅಹ್ಮದ್ ಖಾನ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಅಲ್ಪಸಂಖ್ಯಾತರ ವಸತಿ ಶಾಲೆಗಳ ಪರಿಶೀಲನಾ ಸಮಿತಿ ರಚನೆ

ಬೆಂಗಳೂರು, ಸೆ. 24: ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳ ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಆಹಾರದ ಗುಣಮಟ್ಟ, ಪೂರೈಕೆ ವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯಗಳ ಸಮಗ್ರ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ವಿಶೇಷ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಸೂಚನೆ ಸಂಖ್ಯೆ MWD 748 MDS 2026, ದಿನಾಂಕ 24 ಸೆಪ್ಟೆಂಬರ್ 2026ರ ಅನ್ವಯ ಈ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ಅಧ್ಯಕ್ಷರಾಗಿ ಶಿಗ್ಗಾಂವ್ ಶಾಸಕ ಯಾಸಿರ್ ಖಾನ್ ಅಹ್ಮದ್ ಖಾನ್ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಮೊಹಮ್ಮದ್ ರಫೀಕ್ ಜಿ.ಎಸ್. (ಬಳ್ಳಾರಿ), ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್ ಕೌರ್, ರಾಜೀವ್ ಗಾಂಧಿ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ ನಜೀರ್ ಅಹ್ಮದ್ ಕಂಗನೊಳ್ಳಿ (ಜಮಖಂಡಿ), ಶಿಕ್ಷಣ ತಜ್ಞ ಹಾಗೂ ಉದ್ಯಮಿ ಅಶ್ರಫ್ ಅಲಿ ಬಶೀರ್ ಅಹ್ಮದ್, ಲಾಲ್ ಅಹ್ಮದ್ (ಕಲಬುರಗಿ), ಇಮ್ರಾನ್ ಯಳಿಗಾರ್ (ಹುಬ್ಬಳ್ಳಿ) ಮತ್ತು ಸುಶೀಲ್ ಬೆಳಗಲಿ (ಹುಬ್ಬಳ್ಳಿ) ಅವರನ್ನು ಒಳಗೊಂಡಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸಂತನಗರದ ಜಂಟಿ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಸಮಿತಿಯು ಉತ್ತರ ಕರ್ನಾಟಕದ ವಸತಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಆಹಾರ ಪೂರೈಕೆ ವ್ಯವಸ್ಥೆ, ವಸತಿ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ. ಸಮಿತಿಯ ವರದಿ ಆಧರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.

ಹೆಚ್ಚಿನ ಸುದ್ದಿ