ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ಜಿಲ್ಲಾ ಯಾದಗಿರಿ ನಗರದಲ್ಲಿರುವ ನಿವೇಶನ ನೀಡದಿರುವುದಕ್ಕೆ ಜಿಲ್ಲಾಡಳಿತ ಎದುರುಗಡೆ ನಿರಂತ ಧರಣಿ
ಯಾದಗಿರಿ ನಗರದಲ್ಲಿ. 08.09. ವರ್ಷಗಳಿಂದ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ ವತಿಯಿಂದ 2017 ನೇ ಸಾಲಿನಲ್ಲಿ ನಿವೇಶನ ರಹಿತರ ಸಮಸ್ಯೆಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು ದಿನಾಂಕ 29.01.2020 ರಲ್ಲಿ ಜಿಲ್ಲಾಡಳಿತ ಎದುರುಗಡೆ ಆರು ದಿನಗಳ ಕಾಲ ನಿರಂತರಣಿಯನ್ನು ಮಾಡಿದಾಗ ಜಿಲ್ಲಾಡಳಿತ ಮುಂಡರಗಿಯಲ್ಲಿರುವ ಸರ್ಕಾರಿ ಜಾಗವನ್ನು ತೋರಿಸಿ ಫಲಾನುಭವಿಗಳಿಗೆ ನೀಡುವದಾಗಿ ಆಶ್ವಾಸನೆ ತೋರಿಸಿದ ಮೇಲೆ ಧರಣಿಯನ್ನು ಹಿಂಪಡೆದಿದ್ದು
ಇದಾದ ನಂತರ ಕೋವಿಡ್ 19 ನೆಪ್ಪ ಹೇಳಿ ನಿವೇಶನ ರಹಿತರ ಸಮಸ್ಯೆಯನ್ನು ಕೈಬಿಟ್ಟಿರುವದು ಮತ್ತು ಇದಾದ ನಂತರ ದಿನಾಂಕ 18.01.2021 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಪ್ರತಿಭಟನೆ ಮಾಡಿದ ಅಪರ ಜಿಲ್ಲಾಧಿಕಾರಿಗಳ ಳುಡನೆ ಸಭೆ ನಡೆಸಿ ಖಾಸಗಿ ಜಮೀನು ಖದದಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ ಸದರಿ ಒಂದು ತಿಂಗಳಲೀ ಸ್ಲಂ ನಿವಾಸಿಗಳಿಗೆ ವಾಜಪೇಯಿ ನಗರದ ನಿವೇಶನ ರಹಿತರಿಗೆ ನೀವೇಶನ ಕೊಡುವುದಾಗಿ
ಹುಸಿ ಭರವಸೆ ನೀಡಿದ್ದು
ಇದಾದ ನಂತರ ನಿರಂತರವಾಗಿ ಜಿಲ್ಲಾಡಳಿತ ಗಮನಕ್ಕೆ ನಿವೇಶನ ರಹಿತರ ಸಮಸ್ಯೆಯನ್ನು ತಂದಿದ್ದು ಜಿಲ್ಲಾಡಳಿತವು ಸ್ಪಂದನೆ ನೀಡದೆ ಇರುವಾಗ ದಿನಾಂಕ 02-03-2023 ರಂದು ಅನಿದಿಷ್ಟ ಸತ್ಯಾಗ್ರಹ ಧರಣಿಯನ್ನು 15 ದಿನಗಳ ಕಾಲ ಹೋರಾಟ ಮಾಡಿದ ನಂತರ ಮಾನ್ಯ ಜಿಲ್ಲಾಧಿಕಾರಿಗಳು ಚುನಾವಣಾ ನಂತರ ನಿವೇಶನ ರಹಿತ ಸಮಸ್ಯೆಯನ್ನು ಬಗೆಹರಿಸುವೆನೆಂದು ಮತ್ತು ನಿಜವಾದ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದ ಮೇಲೆ ಲಿಖಿತ ರೂಪದಲ್ಲಿ ಕೊಟ್ಟ ಮೇಲೆ ಧರಣಿಯನ್ನು ಹಿಂಪಡೆಯಲಾಯಿತು
ಈಗ ಚುನಾವಣೆ ಮುಗಿದ ನಂತರವೂ ಜಿಲ್ಲಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಎರಡು ವರ್ಷದಿಂದ ಭೇಟಿ ನೀಡಿ ಗಮನಕ್ಕೂ ತಂದರು ಸಹ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ
ದಿನಾಂಕ 05,12,2025 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿವೇಶನ ರಹಿತರ ಸಮಸ್ಯೆಯನ್ನು ಬಗೆಹರಿಸುವ ಬೇಕೆಂದು ಮನವಿ ಸಲ್ಲಿಸಲಾಯಿತು . ದಿನಾಂಕ 10.06.2026. ರಂದು ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಸಲ್ಲಿಸಲಾಗಿದೆ
ದಯಾಳುಗಳಾದ ತಾವು ನಮ್ಮ ನೇತೃತ್ವದಲ್ಲಿ ಯಾದಗಿರಿ ನಗರದಲ್ಲಿರುವ ನಿವೇಶನ ಬಹಿತರಿಗೆ ನಿವೇಶನ ನೀಡಬೇಕೆಂದು ಸುಮಾರು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಹೋರಾಟದ ಮುಖಾಂತರ ಮತ್ತು ಮನವಿ ಮುಖಾಂತರ ವಿನಂತಿಸಿಕೊಂಡರು ಸಹ ಇಲ್ಲಿಯವರೆಗೆ ಜಿಲ್ಲಾಡಳಿತ ನಿರ್ಲಕ್ಷ ತೋರಿಸುವದರಿಂದ ದಿನಾಂಕ 06,10,2026 ರಂದು ಜಿಲ್ಲಾಡಳಿತ ಕಚೇರಿಯ ಎದುರುಗಡೆ ನಿವೇಶನ ರಹಿತರಿಗೆ ಸಿಗುವವರೆಗೂ ನಿರಂತ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ
ದಿನಾಂಕ 13.10.2026 ರಂದು ಸರ್ಕಾರಿ ಜಾಗವನ್ನು ತೋರಿಸಿದ ಫಲಾನುಭವಿಗಳಿಗೆ ನೀಡುವುದಾಗಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಆಶ್ವಾಸನೆ ತೋರಿದ ಮೇಲೆ ಧರಣಿಯನ್ನು ಹಿಂಪಡೆಯಲಾಯಿತು
ಈ ಸಂದರ್ಭದಲ್ಲಿ
ಶ್ರೀ ಹಣಮಂತ ಶಾಹಾಪೂರಕರೆ ಜಿಲ್ಲಾಧ್ಯಕ್ಷರು
ಶ್ರೀಮತಿ ಸಂಗೀತ ಹಳ್ಳಪ್ಪ
ಸಂಚಾಲಕರು
ಶ್ರೀಮತಿ ರೇಣುಕಾ ಸರಡಗಿ ಸಂಘಟನಾ ಕಾರ್ಯದರ್ಶಿ
ಶ್ರೀಮತಿ ಈರಮ್ಮ ಕೋಳೂರು ಉಪಾಧ್ಯಕ್ಷರು
ಶ್ರೀಮತಿ ವೆಂಕಮ್ಮ ಮಾಳಿಕೇರಿ ಉಪಾಧ್ಯಕ್ಷರು
ಶ್ರೀಮತಿ ಶಂಕ್ರಮ್ಮ ಕೊಟ್ಟಿಮನಿ ಸ್ಲಂ ಮಹಿಳಾ ಮುಖಂಡರು
ಶ್ರೀಮತಿ ಸಂಗೀತ ಹರಿಕೇರೆ
ಸ್ಲಂ ಮಹಿಳಾ ಮುಖಂಡರು
ಶ್ರೀಮತಿ ನಿರ್ಮಲಾ ಸುಂಗಲಕರ್ ಸ್ಲಂ ಮಹಿಳಾ ಮುಖಂಡರು
ಶ್ರೀ ಬಾಬು ಮಿಯಾ ಸ್ಲಂ ಮಹಿಳಾ ಮುಖಂಡರು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಜಿಲ್ಲಾ ವರದಿಗಾರರು ಶಿವು ರಾಠೋಡ.

