ಮಂಡ್ಯ : 10 ರಿಂದ 15 ಜನ ಮಾಜಿ ಹಾಗೂ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ದರಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಗ್ಗೆ ಮಾತು ಕತೆ ನಡೆಯುತ್ತಿದೆ.ಕೆಲವೇ ದಿನಗಳಲ್ಲಿ ಎಲ್ಲವೂ ಕೂಡ ಅಂತಿಮವಾಗಲಿದೆ, ಯಾರ ಹೆಸರನ್ನು ಈಗ ಹೇಳಲು ಸಾಧ್ಯವಿಲ್ಲ, BJP, JDS ಪಕ್ಷದಿಂದ ನಮ್ಮ ಪಕ್ಷಕ್ಕೆ ಬರುವುದು ಖಚಿತ ಎಂದರು.
ರಾಜ್ಯದಲ್ಲಿ ಬರ ಘೋಷಣೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಸಭೆ ನಡೆಸಿದ್ದೇವೆ, ಜೂನ್ ಮತ್ತು ಆಗಸ್ಟ್ ನಲ್ಲಿ ಮಳೆ ಕೊರತೆಯಾಗಿದೆ, ಶೇ 60 ರಷ್ಟು ಬರ ಇದ್ದರೆ ಕೇಂದ್ರ ಅನುದಾದ ಬಿಡುಗಡೆ ಮಾಡುತ್ತೆ.
ಇದನ್ನ 30% ಗೆ ಇಳಿಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಆ ಪತ್ರಕ್ಕೆ ಕೇಂದ್ರದಿಂದ ಉತ್ತರ ಬಂದಿಲ್ಲ, ಇದರಿಂದ ವಿಶೇಷ ಅನುದಾನವನ್ನ ಕೇಂದ್ರದಿಂದ ಕೇಳಿಲ್ಲ. 30% ಇಳಿಸುವ ಬಗ್ಗೆ ಉತ್ತರ ಬಂದ ನಂತರ ಸಭೆ ನಡೆಸಿ ತೀರ್ಮಾನ ಮಾಡಲಾಗುತ್ತೆ, ಕಮಿಟಿ ಮೀಟಿಂಗ್ ನಲ್ಲಿ ಬರ ನೀರಿನ ಪರಿಸ್ಥಿತಿಯ ವರದಿಯನ್ನ ಅಧಿಕಾರಿಗಳ ಬಳಿ ಕೇಳಿದ್ದೇವೆ ಎಂದು ಹೇಳಿದರು.
ಗುತ್ತಿಗೆದಾರರಿಂದ ಹಣ ವಸೂಲಿ ಆರೋಪ ವಿಚಾರವಾಗಿ ಅಯ್ಯೋ ಬಿಡಪ್ಪ, ಕೆಲಸ ಇಲ್ಲದವ್ರು ಮಾತನಾಡೋದು, ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ಪೇಮೆಂಟ್ ಕೊಟ್ಟಿರಲಿಲ್ಲ.
ನಾವು ಬಂದು ಕೇವಲ 3 ತಿಂಗಳಾಗಿದೆ, 2.5 ಲಕ್ಷ ಕೋಟಿ ಅನುದಾನವನ್ನ ಒಂದೇ ಸಲಿ ಎಷ್ಟು ಅಂತಾ ಕೋಡೋಕೆ ಆಗುತ್ತೆ, ಬಾಯಿ ಚಪಲಕ್ಕೆ ಏನೇನೋ ಮಾತಾಡ್ತಾರೇ ಅವ್ರಿಗೆಲ್ಲ ಉತ್ತರ ಕೋಡೋಕೆ ಆಗುತ್ತಾ
ಎಂದು ವಿವರಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸದಾ ರೈತರ ಪರ ಇದ್ದೀವಿ, ಸಿಡಬ್ಲ್ಯೂಎಸ್ ಕಮಿಟಿ ಇರೋದು ಕೇಂದ್ರದಲ್ಲಿ. ಕೇಂದ್ರ ಸರ್ಕಾರವನ್ನು ಮನವೊಲಿಸಿ ರೈತರ ರಕ್ಷಣೆಗೆ ಮುಂದಾಗಿದ್ದೇವೆ. ಕಮಿಟಿಯಲ್ಲಿ ರಾಜ್ಯ ಸರ್ಕಾರ ನೀರಾವರಿ ಇಲಾಖೆ ಸಮರ್ಥವಾಗಿ ವಾದ ಮಂಡಿಸಿದೆ. ಕಮಿಟಿಯ ತೀರ್ಮಾನ ಒಪ್ಪದೇ ತಮಿಳಿನಾಡು ಸುಪ್ರೀಂಕೋರ್ಟ್‌ಗೆ ಹೋಗಿದೆ, ಸುಪ್ರೀಂಕೋರ್ಟ್‌ನಲ್ಲಿ ಕೇಸ್ ದಾಖಲು ಆಗಿದೆ, ಇನ್ನೂ ತೀರ್ಪು ಬಂದಿಲ್ಲ,ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಬೆಳೆಗಳ ರಕ್ಷಣೆಗೆ ಹಾಗೂ ಕುಡಿಯುವ ನೀರಿಗೆ ಕ್ರಮ ವಹಿಸಿದ್ದೇವೆ, ಕೋರ್ಟ್ ಏನು ತೀರ್ಮಾನ ಏನು ಹೇಳುತ್ತೆ ಅದರ ಮೇಲೆ ಮುಂದೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ಹೆಚ್ ಡಿಕೆ ಒತ್ತಾಯ ವಿಚಾರವಾಗಿ, ಈ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ, ಸರ್ವಪಕ್ಷಗಳ ಸಭೆ ಕರೆಯುವ ಸಂದರ್ಭದಲ್ಲಿ ಸಿಎಂ ಕರೆಯುತ್ತಾರೆ.
ಈ ಹಿಂದೆ ಕಾವೇರಿ ವಿಚಾರದಲ್ಲಿ ಅನೇಕ ಬಾರಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ, ಇವತ್ತು ಆ ಸಂದರ್ಭ ಬಂದಾಗ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ, ಒಂದು ಕಡೆ ತಮಿಳುನಾಡು ನೀರು ಕೇಳ್ತಾ ಇದೆ, ಇನ್ನೊಂದು ಡ್ಯಾಂನಲ್ಲಿ ಅಗತ್ಯದಷ್ಟು ನೀರಿಲ್ಲ, ಮಳೆ ಬೀಳ್ತಾ ಇಲ್ಲ ಹಾಗೂ ಒಳಹರಿವೂ ಬರ್ತಿಲ್ಲ, ರೈತರು ಪರಿಸ್ಥಿತಿಗೆ ಸಹಕಾರ ನೀಡಬೇಕು. ಇರುವ ಬೆಳೆಗಳಿಗೆ ನಾವು ನೀರು ಕೊಡಲು ಚಿಂತನೆ ಮಾಡಿದ್ದೇವೆ ಎಂದು ಮಾಹಿತಿ ಕೊಟ್ಟರು.