KRGRV
Wednesday, August 19, 2026
Homeಜಿಲ್ಲಾ ಸುದ್ದಿಗಳುರೈತ ಮುಖಂಡ ಗದ್ದೆಪ್ಪ ನಾಗಬೇನಾಳ ನಿಧನ: ಕೃಷಿ ವಲಯದಲ್ಲಿ ಮೂಡಿದ ಕಡುಕತ್ತಲು

ರೈತ ಮುಖಂಡ ಗದ್ದೆಪ್ಪ ನಾಗಬೇನಾಳ ನಿಧನ: ಕೃಷಿ ವಲಯದಲ್ಲಿ ಮೂಡಿದ ಕಡುಕತ್ತಲು

ಹುಣಸಗಿ : ರೈತರ ಹಕ್ಕುಗಳಿಗಾಗಿ, ನೀರಾವರಿ ಸೌಲಭ್ಯಗಳಿಗಾಗಿ ಹಾಗೂ ಹಾಗೂ ಬಹು ದಿನಗಳ ಬೇಡಿಕೆಯಾದ ದೇವರ ಗಡ್ಡಿ ಮತ್ತು ಮೇಲಿನ ಗಡ್ಡಿ ಗ್ರಾಮಕ್ಕೆ ಬಸ್ಸುಗಳಿಲ್ಲದ ಕಾರಣಕ್ಕೆ ಶಾಲಾ ಮಕ್ಕಳು ಹಿರಿಯ ನಾಗರಿಕರು ದಿನಾಲು 3 ಕಿ.ಮೀ ದೂರ ಪ್ರಯಾಣ ಮಾಡಿ ಅನುಭವಿಸಿದ್ದರು ಬಸ್ಸು ಬಿಡುಗಡೆಗೆ ಕಾರಣಕರ್ತರಾದ ಗದ್ಯಪ್ಪ ನಾಗಬೇನಾಳ ಇವರು ಬಸು ಬಿಡುಗಡೆಗೆ ಮುಂಚಿನಹಳ್ಳಿದ್ದು ಬಿಡುಗಡೆ ಮಾಡಿದ್ದಾರೆ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ ಹಿರಿಯ ರೈತ ಮುಖಂಡ, ಕರ್ನಾಟಕ ರಾಜ್ಯ ರೈತ ಸಂಘದ ಹುಣಸಗಿ ತಾಲೂಕು ಉಪಾಧ್ಯಕ್ಷರಾದ ಡಿ|| ಗದ್ದೆಪ್ಪ ನಾಗಬೇನಾಳ (ದೇವರಗಡ್ಡಿ) ಅವರು ನಿಧನರಾಗಿದ್ದಾರೆ.

ರೈತ ಸಂಘದ ಪ್ರಮುಖರ ಪ್ರಕಾರ, ಅವರು ದಿನಾಂಕ 19-08-2026ರಂದು ರಾತ್ರಿ 12:30 ಗಂಟೆಗೆ ವಿಧಿವಶರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಅಂದರೆ ದಿನಾಂಕ 19-08-2026ರಂದು ಮಧ್ಯಾಹ್ನ 3:30 ಗಂಟೆಗೆ ಅವರ ಸ್ವಗ್ರಾಮವಾದ ಹುಣಸಗಿ ತಾಲೂಕಿನ ದೇವರಗಡ್ಡಿ (ಜಂಗಿನಗಡ್ಡಿ) ಯಲ್ಲಿ ನೆರವೇರಲಿದೆ.

ಹೋರಾಟದ ಬದುಕು:
ದೇವರಗಡ್ಡಿ ಗ್ರಾಮದವರಾದ ಗದ್ದೆಪ್ಪ ನಾಗಬೇನಾಳ ಅವರು ನಾರಾಯಣಪುರ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರ ಧ್ವನಿಯಾಗಿದ್ದರು.

ಹೆಚ್ಚಿನ ಸುದ್ದಿ