KRGRV
Monday, December 23, 2024
Homeರಾಜ್ಯಕೊಡಗು, ಮೈಸೂರು, ದಾವಣಗೆರೆ ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ : ಎಲ್ಲೆಲ್ಲಿ ಏನೇನು ಸಿಕ್ತು...

ಕೊಡಗು, ಮೈಸೂರು, ದಾವಣಗೆರೆ ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ : ಎಲ್ಲೆಲ್ಲಿ ಏನೇನು ಸಿಕ್ತು ?

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿಗೆ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಶಿವಮೊಗ್ಗ , ಚಿಕ್ಕಬಳ್ಳಾಪುರ, ದೇವನಹಳ್ಳಿ, ಕೊಡಗು, ಮೈಸೂರು, ದಾವಣಗೆರೆ, ಬೀದರ್‌ ಸೇರಿ ವಿವಿಧೆಡೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಚಿಕ್ಕಜಾಲ ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಿಪತಿ ಮನೆ ಫಾರ್ಮ್‌ ಹೌಸ್ ಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಕೊಡೂರು ಗ್ರಾಮದ ಬಳಿ ಈ ಫಾರ್ಮ್‌ ಹೌಸ್‌ ಇದೆ. ಪತ್ನಿ ಆರತಿ ಹೆಸರಿನಲ್ಲಿ ನಾಲ್ಕು ಎಕರೆ ಇರುವ ಜಮೀನು ಹಾಗೂ ಫಾರ್ಮ್‌ ಹೌಸ್‌ ಇದೆ. ನಿರ್ಮಾಣ ಹಂತದ ತೋಟದ ಮನೆ ಪರಿಶೀಲನೆಯನ್ನು ಮಾಡಿದ್ದಾರೆ.

ಇನ್ನೂ ದೇವನಹಳ್ಳಿ ತಹಶಿಲ್ದಾರ್ ಶಿವರಾಜ್ ಮನೆ ಮೇಲೆ ದಾಳಿ ಮಾಡಿದ್ದು, ತಹಶಿಲ್ದಾರ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಏರ್ಪೋಟ್ ಟೋಲ್‌ ನ ಕನ್ನಮಂಗಲ ಬಳಿಯ ಒಜೋನ್ ಅರ್ಬನಾದಲ್ಲಿರುವ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ ಅಕ್ರಮ ಖಾತೆ ಹಾಗೂ ಸರ್ಕಾರಿ ಜಮೀನು ಪರಭಾರೆ‌ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಅಷ್ಟೇ ಅಲ್ಲದೇ ಕೊಡಗು ಅಪರ ಜಿಲ್ಲಾಧಿಕಾರಿ ಮನೆ ಮೇಲೆ‌ ಲೋಕಾ‌ಯುಕ್ತ ದಾಳಿ ನಡೆಸಿದ್ದು, ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ SP ಸುರೇಶ್ ಬಾಬು, ಲೋಕಾಯುಕ್ತ DYSP ಎಂಎಸ್ ಪವನ್ ಕುಮಾರ್, ಇನ್ಸ್‌ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಮಾಕನಳ್ಳಿಯಲ್ಲಿರುವ ಮಾವನ ಮನೆ ಮತ್ತು ಮೈಸೂರಿನಲ್ಲಿರೋ ಭಾವ ಮೈದುನ ಮನೆಯಲ್ಲೂ ಶೋಧ ಮಾಡಲಾಗಿದೆ.

ಇದ್ರ ಜೊತೆಗೆ ದಾವಣಗೆರೆಯ ಚನ್ನಗಿರಿ ಆರ್‌ ಎಫ್ಒ ಸತೀಶ್ ರವರ ಶಿವಮೊಗ್ಗ ಮನೆ ಮೇಲೆ ದಾಳಿ ಮಾಡಲಾಗಿದ್ದು, ಆರ್ ಎಫ್ ಒ ಸತೀಶ್ ಅವರ ವೃಷಭಾದ್ರಿ ಮನೆ ಮೇಲೆ ಎರಡು ಜೀಪ್ ಗಳಲ್ಲಿ ಬಂದಿರುವ 7 ಕ್ಕೂ ಅಧಿಕಾರಿ- ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ. ಬೀದರ್ ನಲ್ಲಿ ಬೆಳ್ಳಂಬೆಳ್ಳಗ್ಗೆ ಲೋಕಾಯುಕ್ತ ದಾಳಿ ಮಾಡಲಾಗಿದ್ದು, ವಿಜಯಕುಮಾರ್ ಎಂಬ ಪೊಲೀಸ್ ಕಾನ್ಸ್‌ಟೇಬಲ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ.

ಬೀದರ್‌ ಜಿಲ್ಲೆಯ ಚಿಟ್ಟಗುಪ್ಪ ಪೊಲೀಸ್ ಠಾಣೆಯಲ್ಲಿ ವಿಜಯಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದು, ಹುಮ್ನಾಬಾದ್ ಪಟ್ಟಣದ ನಿವಾಸ ಹಾಗೂ ಚಿಟ್ಟಗುಪ್ಪ ತಾಲೂಕಿನ ಹುಚಕನಳ್ಳಿ ಗ್ರಾಮ ತಂದೆ ನಿವಾಸ ಮೇಲೆ ದಾಳಿ ಲೋಕಾಯುಕ್ತ ಡಿವೈಎಸ್ಪಿ ಓಲೇಕಾರ ನೇತ್ರತ್ವದಲ್ಲಿ ದಾಳಿ ನಡೆಸಿದ್ದಾರೆ.

ಹಾರಂಗಿ ಸೂಪರಿಟೆಂಡ್ ಇಂಜಿನಿಯರ್ ರಘುಪತಿ ಮನೆ ಮೇಲೆ ಲೋಕಾಯುಕ್ತ ರೈಡ್ ನಡೆದಿದ್ದು, ಸದ್ಯ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.

ಚಿನ್ನ, ಬೆಳ್ಳಿ ಪದಾರ್ಥಗಳ ಮೌಲ್ಯದ ಬಗ್ಗೆ ಮಾಹಿತಿ ಕಲೆ ಹಾಕಲು ಅಕ್ಕಸಾಲಿಗರನ್ನು ಕರೆಸುತ್ತಿರುವ ಅಧಿಕಾರಿಗಳು ರಘುಪತಿ ಮನೆಯಲ್ಲಿ ಮುಂದುವರಿದ ಶೋಧ ಕಾರ್ಯ ನಡೆಯುತ್ತಿದೆ. ಡಿವೈ ಎಸ್ ಪಿ ಮಾಲತೇಶ್, ಇನ್ಸ್ ಪೆಕ್ಟರ್ ಉಮೇಶ್, ಜಯರತ್ನ, ರೂಪಾ ಅವರಿಂದ ಶೋಧ ಕಾರ್ಯ ನಡೆದಿದೆ. ಅಷ್ಟೇ ಅಲ್ಲದೇ ಬೆಲೆ ಬಾಳುವ ಬ್ರಾಂಡೆಡ್ ವ್ಯಾನಿಟಿ ಬ್ಯಾಗ್‌ಗಳು ಮನೆಯಲ್ಲಿ ಸಿಕ್ಕಿವೆ.

ಹೆಚ್ಚಿನ ಸುದ್ದಿ