KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆಗೆ ಮಾಜಿ ಶಾಸಕ ಎನ್. ಮಹೇಶ್ ಒತ್ತಾಯ

ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆಗೆ ಮಾಜಿ ಶಾಸಕ ಎನ್. ಮಹೇಶ್ ಒತ್ತಾಯ

ಚಾಮರಾಜನಗರ : ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆಗೆ ಮಾಜಿ ಶಾಸಕ ಎನ್. ಮಹೇಶ್ ಆಗ್ರಹಿಸಿದ್ದಾರೆ.

ದಲಿತರ ಕುರಿತು ಹಗುರವಾಗಿ ಮಾತಾಡಿರುವ ಎಸ್.ಎಸ್. ಮಲ್ಲಿಕಾರ್ಜುನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ ಎನ್‌ ಮಹೇಶ್‌, ದಲಿತರ ಕುರಿತು ಹಗುರವಾಗಿ ಮಾತಾಡೋರಿಗೆ ಪಾಠವಾಗಬೇಕು
ನಾವು ಈ ದೇಶದ ಮೂಲ ನಿವಾಸಿಗಳು, ಅಸ್ಪೃಶ್ಯ ಸಮುದಾಯದ ನಾವು ಯಾರ ಮೇಲೂ ದಬ್ಬಾಳಿಕೆ, ದೌರ್ಜನ್ಯ ಮಾಡಿಲ್ಲ, ಪ್ರಾಮಾಣಿಕವಾಗಿ ದುಡಿದು ಬದುಕುತ್ತಿದ್ದೇವೆ, ಜಾತಿ ಆಧಾರದ ಮೇಲೆ ಯಾರನ್ನೂ ಕೀಳಾಗಿ ಕಂಡಿಲ್ಲ, ಎಸ್.ಎಸ್. ಮಲ್ಲಿಕಾರ್ಜುನ ಅವ್ರಿಗೆ ಸಂವಿಧಾನದ ಮೇಲೆ ನಂಬಿಕೆಯಿದ್ದರೆ ಕೂಡಲೇ ಸಚಿವ ಸ್ಥಾ‌ನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ದಲಿತರಾಮಯ್ಯ ಎಂದು ಕರೆಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಹಾಗು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಬೇಕು, ಹೀಗಾಗಿ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸಂವಿಧಾನದ ಮೇಲೆ ನಂಬಿಕೆಯಿದ್ದರೆ ಕೂಡಲೇ ಸಚಿವ ಸ್ಥಾ‌ನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಹೆಚ್ಚಿನ ಸುದ್ದಿ