KRGRV
Monday, December 23, 2024
Homeದೇಶದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

ಬೆಂಗಳೂರು : ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ಶುಕ್ರವಾರ ಉದ್ಘಾಟಿಸಿದರು. ಬೆಂಗಳೂರಿನ ಕೆಂಬ್ರಿಡ್ಜ್‌ ಲೇಔಟ್‌ನಲ್ಲಿ ನಿರ್ಮಾಣವಾಗಿರುವ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು ಅಶ್ವಿನಿ ವೈಷ್ಣವ್‌ ಅವರು ಉದ್ಘಾಟಿಸಿದ್ದು, ಬಳಿಕ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಚೇರಿಯ ಮಾದರಿ​ ಬಿಡುಗಡೆ ಮಾಡಿದರು.

Vidverto Player ಬೆಂಗಳೂರಿನ ಕೆಂಬ್ರಿಡ್ಜ್‌ ಲೇಔಟ್‌ನಲ್ಲಿ ನಿರ್ಮಾಣವಾಗಿರುವ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು ಅಶ್ವಿನಿ ವೈಷ್ಣವ್‌ ಅವರು ಉದ್ಘಾಟಿಸಿದ್ದು, ಬಳಿಕ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಚೇರಿಯ ಮಾದರಿ​ ಬಿಡುಗಡೆ ಮಾಡಿದರು.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಬೆಂಗಳೂರಿಗೆ ಬರಲು ಸಂತಸವಾಗುತ್ತದೆ. ಈ ನಗರವು ಸಾಕಷ್ಟು ಶಕ್ತಿಯನ್ನು ಹೊಂದಿದೆ. ಇಲ್ಲಿ ಸಕಾರಾತ್ಮಕ ಚಿಂತನೆ ಅಧಿಕವಾಗಿದೆ. ಬೆಂಗಳೂರು ಯಾವಾಗಲೂ ಭಾರತಕ್ಕೆ ಹೊಸ ಚಿತ್ರಣವನ್ನು ನೀಡುತ್ತಿರುತ್ತದೆ. ಈ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ನೀವು ನೋಡಿದ ಹೊಸ ಚಿತ್ರ.  ಭಾರತವು ಇಂದು ಅಭಿವೃದ್ಧಿಯಾಗುತ್ತಿದ್ದು, ದೇಶವು ನಿರ್ಣಾಯಕ ಮತ್ತು ನಮ್ಮ ಜನರ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನು ಹೊಂದಿರುವ ನಾಯಕತ್ವವನ್ನು ಹೊಂದಿರುವುದರಿಂ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದರು.

ಈ ಅಂಚೆ ಕಚೇರಿಗೆ “ಕೇಂಬ್ರಿಡ್ಜ್ ಲೇಔಟ್ ಪಿಒ” ಎಂದು ಹೆಸರಿಸಲಾಗಿದೆ. ಇದೇ ವರ್ಷ ಮಾರ್ಚ್ 21 ರಿಂದ ನಿರ್ಮಾಣದ ಕಾರ್ಯ ಆರಂಭವಾಗಿದ್ದು, 44 ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

ಕಟ್ಟಡದ ನಿರ್ಮಾಣ ಕಾರ್ಯ ಮೇ 3ರ ಒಳಗಡೆಯೇ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಸಂಪರ್ಕ ಸಂಬಂಧದ ಕಾಮಗಾರಿಗೆ ಎರಡು ತಿಂಗಳು ಸಮಯ ತೆಗೆದುಕೊಂಡಿತ್ತು. ಇನ್ನು ಉದ್ಘಾಟನೆಗೆ ಸಚಿವರ ಲಭ್ಯತೆಗಾಗಿ ಒಂದು ತಿಂಗಳು ಹಿಡಿದಿತ್ತು. ಈ ಕಚೇರಿ ಆರಂಭವಾದ ನಂತರ ಹಲಸೂರು ಬಜಾರ್‌ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಲಾಗುವುದು. ಮತ್ತು ಅಲ್ಲಿಯ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

“ಎಲ್ & ಟಿ (ಲಾರ್ಸೆನ್ ಮತ್ತು ಟೂಬ್ರೊ) ನಿರ್ಮಿಸಿರುವ ಕಟ್ಟಡವು ಸುಮಾರು 1,100 ಚದರ ಅಡಿ ವಿಸ್ತೀರ್ಣದಲ್ಲಿದೆ. 3ಡಿ ತಂತ್ರಜ್ಞಾನ ಅಳವಡಿಸಲು ತೆರಿಗೆ ಸೇರಿ ಸುಮಾರು 26 ಲಕ್ಷ ರೂ. ವೆಚ್ಚವಾಗಿದೆ.

ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳು ಸೇರಿ ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗಿದೆ. ಈ ಮೂಲಕ ಸಾಂಪ್ರದಾಯಿಕ ಅಂಚೆ ಕಚೇರಿ ನಿರ್ಮಿಸಿದರೇ ಎಷ್ಟು ಖರ್ಚಾಗುತ್ತಿತ್ತು ಅದಕ್ಕೆ ಹೋಲಿಸಿದರೆ ಈ ಅಂಚೆ ಕಚೇರಿಯ ನಿರ್ಮಾಣ ವೆಚ್ಚದಲ್ಲಿ ಶೇ. 30ರಿಂದ 40ರಷ್ಟು ಹಣ ಇಳಿಕೆಯಾಗಿದೆ.

ಹೆಚ್ಚಿನ ಸುದ್ದಿ