ಬೆಂಗಳೂರು August:16: ನಿಂತಿರುವ ವಾಹನದ ಮೇಲೆ ಸೈಜು ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಗ್ಲಾಸ್ ಪುಡಿ ಮಾಡಿದ ಘಟನೆ ಕೆಂಗೇರಿ(Kengeri) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಫುಟ್ಪಾತ್ ಮೇಲಿನ ಕಲ್ಲನ್ನು ತೆಗೆದುಕೊಂಡು ರಸ್ತೆ ಪಕ್ಕದಲ್ಲಿ ನಿಂತಿದ್ದ ಹತ್ತಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಹೊಡೆದಾಕಿ, ಏನೂ ಗೊತ್ತಿಲ್ಲವೆಂಬಂತೆ ಎಸ್ಕೇಪ್ ಆಗಿದ್ದಾರೆ. ಈ ಕುರಿತು ವಾಹನ ಮಾಲೀಕರು ಕೆಂಗೇರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.