KRGRV
Monday, December 23, 2024
Homeರಾಜ್ಯದೇವದಾಸಿಯರ ಮರು ಸರ್ವೆಗೆ ಆಗ್ರಹಿಸಿ ಶಾಸಕರಿಗೆ ಮನವಿ

ದೇವದಾಸಿಯರ ಮರು ಸರ್ವೆಗೆ ಆಗ್ರಹಿಸಿ ಶಾಸಕರಿಗೆ ಮನವಿ

ಚಿಕ್ಕೋಡಿ : ‘ದೇವದಾಸಿಯರಿಗೆ ಸಂಬಂಧಿಸಿದಂತೆ ಪುನಃ ಸರ್ವೆ ಮಾಡಿಸಿ, ಪಟ್ಟಿಯಿಂದ ಹೊರಗಿರುವ ದೇವದಾಸಿ ಮಹಿಳೆಯರನ್ನು ಸೇರಿಸಬೇಕು. ಮಾಶಾಸನ ಮಂಜೂರು ಮಾಡಬೇಕು’ ಎಂದು ದೇವದಾಸಿ ಮಹಿಳೆ ಮಹಾದೇವಿ ದೇವರವರ ಅವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಲ್ಲಿ ಮನವಿ ಮಾಡಿದರು.

ಶಾಸಕರ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಿದ ಅವರು, ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು.

‘ಬಾಲ್ಯದಲ್ಲಿ ಅರಿವಿಲ್ಲದೇ ನಾವು ಅನಿಷ್ಠ ಪದ್ಧತಿಗೆ ಒಳಗಾಗಿದ್ದೇವೆ. ದೇವದಾಸಿಯರ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿ ಎಂದು 1997ರಲ್ಲಿಯ ಅಂದಿನ ಸರ್ಕಾರ ಸರ್ವೆ ಮಾಡಿಸಿ ಅವರಿಗೆ ಮಾಸಾಶನ ಹಾಗೂ ನಿವೇಶನ ಮಂಜೂರು ಮಾಡಿತು. ದೇವದಾಸಿ ಮಕ್ಕಳಿಗೆ ವಿದ್ಯಾಭ್ಯಾಸ, ಸರ್ಕಾರಿ ವಿವಿಧ ಯೋಜನೆಗಳನ್ನು ನೀಡಿತು. ಆದರೆ, ಈಗ ಗ್ರಾಮದಲ್ಲಿಯೇ ನಾವು ಕೆಲವು ದೇವದಾಸಿ ಮಹಿಳೆಯರು ಸರ್ಕಾರವು ನೀಡುವಂತ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ’ ಎಂದರು.

ಹೆಚ್ಚಿನ ಸುದ್ದಿ