KRGRV
Monday, December 23, 2024
Homeವಿದೇಶಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಪತ್ನಿಗೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಸಂಪುಟದಲ್ಲಿ ಸ್ಥಾನ!

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಪತ್ನಿಗೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಸಂಪುಟದಲ್ಲಿ ಸ್ಥಾನ!

ಇಸ್ಲಮಾಬಾದ್: ಸಾರ್ವತ್ರಿಕ ಚುನಾವಣೆಗೂ ಮುನ್ನ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್-ಹಕ್ 18 ಸದಸ್ಯರ ಉಸ್ತುವಾರಿ ಸಚಿವ ಸಂಪುಟವನ್ನು ರಚಿಸಿದ್ದು ಇದರಲ್ಲಿ ಜಮ್ಮು-ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ, ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಪತ್ನಿ ಮುಷಾಲ್ ಹುಸೇನ್ ಕೂಡಾ ಸೇರಿದ್ದಾರೆ

ಮುಷಾಲ್ `ಮಾನವ ಹಕ್ಕುಗಳ ವಿಷಯದಲ್ಲಿ ಪ್ರಧಾನಿಗೆ ವಿಶೇಷ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿ ಹೇಳಿದೆ. ಯಾಸಿನ್ ಮಲಿಕ್ ನನ್ನು ಭಾರತದ ತಿಹಾರ್ ಜೈಲಿನಲ್ಲಿ ಬಂಧನದಲ್ಲಿರಿಸಲಾಗಿದೆ.

ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಪಾಕಿಸ್ತಾನ ಮೂಲದವರು. ಅವರ ತಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ಅರ್ಥಶಾಸ್ತ್ರಜ್ಞರಾಗಿದ್ದರೆ, ಅವರ ತಾಯಿ ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ಮಹಿಳಾ ವಿಭಾಗದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮುಶಾಲ್ ಅವರ ಸಹೋದರ ಹೈದರ್ ಅಲಿ ಮಾಲ್ಕಿ ಅವರು ಅಮೆರಿಕಾದಲ್ಲಿ ವಿದೇಶಾಂಗ ನೀತಿ ವಿಚಾರದ ಪ್ರಾಧ್ಯಾಪಕರಾಗಿದ್ದಾರೆ.

ಮುಶಾಲ್‌ಗೆ ಪೇಟಿಂಗ್ಸ್‌ ಎಂದರೆ ತುಂಬಾ ಬಹಳ ಇಷ್ಟ. ಅವರು ಆರನೇ ವಯಸ್ಸಿನಲ್ಲಿ ಚಿತ್ರಕಲೆ ಆರಂಭ ಮಾಡಿದ್ದರಯ. ಅದರಲ್ಲೂ ಅರೆ-ನಗ್ನ ವರ್ಣಚಿತ್ರಗಳಿಗೆ ಇವರು ಬಹಳ ಜನಪ್ರಿಯರಾಗಿದ್ದಾರೆ. ಅವರು ಕಾಶ್ಮೀರದ ಜನರ ಸಂಕಷ್ಟದ ಸ್ಥಿತಿಯನ್ನು ಬಿಂಬಿಸುವ ಅನೇಕ ಚಿತ್ರಗಳನ್ನು ಬಿಡಿಸಿದ್ದಾರೆ. ಅದರೊಂದಿಗೆ ಈಕೆ ಪಾಕಿಸ್ತಾನದಲ್ಲಿ ಶಾಂತಿ ಮತ್ತು ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.

2005ರಲ್ಲಿ ಮುಶಾಲ್‌, ಯಾಸೀನ್‌ ಮಲೀಕ್‌ನನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಈ ವೇಳೆ ಯಾಸೀನ್‌ ಪ್ರತ್ಯೇಕತಾವಾದಿ ಚಳವಳಿಗೆ ಬೆಂಬಲ ಕೋರುವ ಸಲುವಾಗಿ ಇಸ್ಲಾಮಾಬಾದ್‌ಗೆ ಹೋಗಿದ್ದರು. ಫೈಜ್ ಅಹ್ಮದ್ ಫೈಜ್ ಅವರ ಜನಪ್ರಿಯ ಕವಿತೆ ಹಮ್ ದೇಖೇಂಗೆಯನ್ನು ಯಾಸಿನ್ ವಾಚಿಸಿದ ಕಾರ್ಯಕ್ರಮದಲ್ಲಿ ಮುಶಾಲ್ ಸಹ ಭಾಗವಹಿಸಿದ್ದರು. ನಂತರ ಇಬ್ಬರೂ 2009 ರಲ್ಲಿ ವಿವಾಹವಾದರು. ಮುಶಾಲ್‌, ಯಾಸೀನ್‌ ಮಲೀಕ್‌ ಅವರಿಗಿಂತ 20 ವರ್ಷ ಕಿರಿಯವರು.

ಹೆಚ್ಚಿನ ಸುದ್ದಿ