Kirik Keerthi: ಪತ್ರಕರ್ತ, ನಿರೂಪಕ, ಬಿಗ್‌ಬಾಸ್ ಕನ್ನಡದ ಸ್ಪರ್ಧಿ, ಸಿನಿಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಿರಿಕ್ ಕೀರ್ತಿ, ತಮ್ಮ ದಾಂಪತ್ಯದ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪತ್ನಿ ಅರ್ಪಿತಾ ಜತೆಗೆ ವಿಚ್ಛೇದನ ಪಡೆದಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆಯೇ ಕಿರಿಕ್ ಕೀರ್ತಿ ಮತ್ತು ಅರ್ಪಿತಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಕೀರ್ತಿ ಬಂದಿದ್ದರಂತೆ.

ಆಗ ಕೇಳಿ ಬಂದ ವದಂತಿಗೆ ಕೀರ್ತಿ ಪ್ರತಿಕ್ರಿಯೆ ನೀಡಿದ್ದರು. ಬೇಸರದಲಿಯೇ ಮನದ ನೋವನ್ನು ಲೈವ್‌ನಲ್ಲಿ ಹಂಚಿಕೊಂಡಿದ್ದರು. ಪ್ಲೀಸ್ ನಮ್ಮನ್ನು ಬದುಕೋಕೆ ಬಿಡ್ರಪ್ಪ, ಯಾಕ್ ಹಿಂಗ್ ಟಾರ್ಚರ್ ಕೊಡ್ತೀರ? ಎಂದಿದ್ದರು. ಇದೀಗ ಅಂದು ಹರಿದಾಡಿದ ಸುದ್ದಿ ನಿಜವಾಗಿದೆ. ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ವಿಚ್ಛೇದನ ನೀಡಿ ಪರಸ್ಪರ ದೂರವಾಗಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ ಕೀರ್ತಿ.
ಕರಿಮಣಿ ಮಾಲೀಕ ನಾನಲ್ಲ

ಪೋಸ್ಟ್ ಆರಂಭದಲ್ಲಿ ಸಕಲರಿಗೂ ಸನ್ಮಂಗಳವಾಗಲಿ ಎಂದು ಬರೆದುಕೊಂಡು, ‘ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ’ ಎಂದು ಬರೆದುಕೊಂಡಿದ್ದಾರೆ ಕೀರ್ತಿ.

ಇನ್ನು ಡಿವೋರ್ಸ್ ವಿಚಾರಕ್ಕೂ ಮೊದಲು ಆಗಸ್ಟ್ 15ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿಯೂ ಕಿರು ಬರಹವೊಂದನ್ನು ಪೋಸ್ಟ್ ಮಾಡಿಕೊಂಡಿದ್ದರು. “ಸಾಕು.. ಇನ್ನು ನನ್ನ ಸಿದ್ದಾಂತ.. ದೇಶ ಪ್ರೇಮ, ಕನ್ನಡ ಪ್ರೇಮ, ಧರ್ಮದ ಅಭಿಮಾನ ನನ್ನ ಮನಸ್ಸಿನಲ್ಲಿ ಮಾತ್ರ… ನಿಮ್ಮ ದ್ವೇಷ, ಫೇಕ್ ನ್ಯೂಸ್, ಅವಮಾನಗಳು, ಬೈಗುಳಗಳು.. ಇದೇ ನಿಮ್ಮಾಸ್ತಿ… ನನಗೆ ಇದನ್ನೆಲ್ಲಾ ಎದುರಿಸೋ ಶಕ್ತಿ ಇದ್ದಂತಿಲ್ಲ… ಯಾಕಂದ್ರೆ ಇದು ನನ್ನಮ್ಮನ್ನ ಕಣ್ಣೀರಿಗೆ ಕಾರಣವಾಗಿದೆ… ಮಗನ ಭವಿಷ್ಯಕ್ಕೆ, ಕುಟುಂಬದ ನೆಮ್ಮದಿಗೆ ದೊಡ್ಡ ಅಡ್ಡಿಯಾಗಿದೆ… ಸಾಕ್ರಪ್ಪಾ ಸಾಕು… ನಾನು ಸೋತರೂ ಪರ್ವಾಗಿಲ್ಲ.. ನಿಮ್ಮ ಮಟ್ಟಿಗೆ ಇಳಿಯೋಕೆ ನಂಗೆ ಸಾಧ್ಯವಿಲ್ಲ.. ನಿಮ್ಮಷ್ಟು ದ್ವೇಷ ನನಗೆ ಜೀವನದಲ್ಲಿ ಯಾವತ್ತೂ ಸಾಧ್ಯವಿಲ್ಲ… ಇನ್ನಾದ್ರೂ ನನ್ನ ಕುಟುಂಬ, ವೈಯಕ್ತಿಕ ಜೀವನವನ್ನು ಬಿಟ್ಟು ನೆಮ್ಮದಿಯಾಗಿ ಅವರನ್ನು ಬದುಕಲು ಬಿಡಿ..” ಎಂದಿದ್ದರು.