KRGRV
Monday, December 23, 2024
Homeರಾಜಕೀಯಕಾಂಗ್ರೆಸ್ ಪಕ್ಷ ಸೇರುವುದು ಮಾಧ್ಯಮಗಳ ಊಹಾಪೋಹ ಎಂದ ಶಿವರಾಮ ಹೆಬ್ಬಾರ

ಕಾಂಗ್ರೆಸ್ ಪಕ್ಷ ಸೇರುವುದು ಮಾಧ್ಯಮಗಳ ಊಹಾಪೋಹ ಎಂದ ಶಿವರಾಮ ಹೆಬ್ಬಾರ

ಇಂದು ಯಲ್ಲಾಪುರ ತಾಲೂಕಿನ ತಮ್ಮ ಕಛೇರಿಯಲ್ಲಿ ಮಾತನಾಡಿದ ಮಾಜಿ ಕಾರ್ಮಿಕ ಸಚಿವ ಮತ್ತು ಹಾಲಿ ಶಾಸಕ ಶ್ರೀ ಶಿವರಾಮ ಹೆಬ್ಬಾರ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕುರಿತು ಮಾತನಾಡಿ ನಾನು ಪಕ್ಷ ಬಿಡುವುದು ಮಾಧ್ಯಮಗಳ ಸೃಷ್ಟಿ ಅಂತಹ ವಿಷಯವನ್ನು ನಾನು ಇದುವರೆಗೂ ಏಲ್ಲಿಯೂ ಪ್ರಸ್ತಾಪಿಸಿಲ್ಲಾ ಎಂದು ಮಾತನಾಡಿದ್ದಾರೆ.

ಬಿಜೆಪಿ ಪಕ್ಷದಲ್ಲೇ ಇಂದು ಕೊಂಡು ನನ್ನನ್ನು ಸೋಲಿಸಲು ಕೆಲವೊಂದು ಮುಖಂಡರು ಪ್ರಯತ್ನ ಮಾಡಿದ್ದಾರೆ ಅವರ ವಿರುದ್ಧ ಲಿಖಿತ ವಾಗಿ ಪಕ್ಷಕ್ಕೆ ಮತ್ತು ಮುಖಂಡರಿಗೆ ಮಾಹಿತಿ ನೀಡಿದ್ದೇನೆ ಆದರೆ ಇದುವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಅದು ಬೇಸರ ಎನಿಸಿದೆ.

ನನ್ನನ್ನು ಸೋಲಿಸಲು ಪಣ ತೊಟ್ಟವರು ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಅಭ್ಯರ್ಥಿಯನ್ನು ಸೋಲಿಸಲು ಪಣ ತೊಡುವುದಿಲ್ಲಾ ಎಂಬುದು ಏನು ಗ್ಯಾರಂಟಿ ಆದ್ದರಿಂದ ಅಂತವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಅವಾಗ ಪಕ್ಷದಲ್ಲಿ ಒಂದು ಶಿಸ್ತು ಬರುತ್ತದೆ ಮತ್ತು ಮುಂದೆ ಪಕ್ಷ ದ್ರೋಹ ಮಾಡುವವರು ಕೂಡ ಹೆದರುತ್ತಾರೆ ಎಂದು ಹೇಳಿದರು.

ನಾನು ಪಕ್ಷ ಬಿಡುವ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಯಾವುದೇ ವಿಚಾರವನ್ನು ಯಾವ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿಲ್ಲಾ..
ನಾನು ಬಿಜೆಪಿ ಪಕ್ಷದಿಂದ ಶಾಸಕನಾಗಿದ್ದೆನೆ ಅಲ್ಲಿಯೇ ಮುಂದುವರೆಯುತ್ತೇನೆ. ಇನ್ನೂ ಯಾವುದೇ ವಿಚಾರವನ್ನು ಮಾಡಿಲ್ಲಾ ಎಂದು ಹೇಳಿದರು.

ಹೆಚ್ಚಿನ ಸುದ್ದಿ