ಬೆಂಗಳೂರು : ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.
ಇಂದಿನ ಸಭೆಯಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಪ್ರಮುಖವಾಗಿ ಈ ಕೆಳಗಿನ ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
- ರಾಯಚೂರಿನ ಕಲ್ಮಲ ಜಂಕ್ಷನ್‌ನಿಂದ ಸಿಂಧನೂರಿಗೆ ಸಂಪರ್ಕ ಕಲ್ಪಿಸುವ
- ಬಳ್ಳಾರಿ – ಲಿಂಗಸೂರು ರಸ್ತೆ ಕಾಮಗಾರಿಯನ್ನು 1,595 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.
- ದೇವನಹಳ್ಳಿ ಬಳಿಯ 5 ಎಕರೆ ಜಮೀನನ್ನು ಬಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಮಂಜೂರು ಮಾಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
- ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸಂಗಮ ಗ್ರಾಮವನ್ನು ‘ಕೂಡಲ ಸಂಗಮವೆಂದು’ ಮರು ನಾಮಕರಣ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.
- ಕಳೆದ 8 ದಿನಗಳ ಹಿಂದೆ, ಅಂದರೆ ಆಗಸ್ಟ್ 10ರಂದು ಸಚಿವ ಸಂಪುಟ ಸಭೆ ನಡೆದಿತ್ತು. ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಅನುದಾನದ ಕುರಿತು ಚರ್ಚೆ ಆಗಿತ್ತು. ಈ ಬೆನ್ನಲ್ಲೇ ಸರ್ಕಾರ ಎಲ್ಲಾ ಶಾಸಕರಿಗೆ ಮೊದಲ ಹಂತದ ಅನುದಾನ ಬಿಡುಗಡೆ ಮಾಡಿ ಆದೇಶಿಸಿದೆ. ಇದೀಗ ಮತ್ತೆ ಸಚಿವ ಸಂಪುಟ ಸಭೆ ಕರೆಯಲಾಗಿದೆ.1ರಿಂದ 9 ನೇ ತರಗತಿಗೆ ಮಕ್ಕಳ ಕಲಿಕಾ ಬಲವರ್ಧನೆಗೆ 78.13 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು