KRGRV
Friday, November 6, 2026
Homeಜಿಲ್ಲಾ ಸುದ್ದಿಗಳುಕಕ್ಕೇರಾ ತಂಡದ ಅಬ್ಬರದ ಆಟಕ್ಕೆ ಕಬ್ಬಡ್ಡಿ ಪ್ರಶಸ್ತಿದೇವರಗಡ್ಡಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ 15 ತಂಡಗಳ ಸೆಣಸಾಟ; ಡವಳಗಿ...

ಕಕ್ಕೇರಾ ತಂಡದ ಅಬ್ಬರದ ಆಟಕ್ಕೆ ಕಬ್ಬಡ್ಡಿ ಪ್ರಶಸ್ತಿದೇವರಗಡ್ಡಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ 15 ತಂಡಗಳ ಸೆಣಸಾಟ; ಡವಳಗಿ ತಂಡಕ್ಕೆ ದ್ವಿತೀಯ ಸ್ಥಾನ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕಕ್ಕೇರಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಗ್ರಾಮದ ಯುವಕರ ಸಹಯೋಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದು, ಆರಂಭದಿಂದಲೇ ಆಟಗಾರರು ಉತ್ತಮ ಪ್ರದರ್ಶನ ನೀಡಿ ಕ್ರೀಡಾಭಿಮಾನಿಗಳ ಗಮನ ಸೆಳೆದರು. ಅಂತಿಮ ಹಂತದ ಪಂದ್ಯದಲ್ಲಿ ಕಕ್ಕೇರಾ ತಂಡ ಎದುರಾಳಿಗಳ ವಿರುದ್ಧ ಉತ್ತಮ ತಂತ್ರಗಾರಿಕೆ ಹಾಗೂ ಸಂಘಟಿತ ಆಟ ಪ್ರದರ್ಶಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.

ಫಲಿತಾಂಶ:
🏆 ಪ್ರಥಮ ಸ್ಥಾನ: ಕಕ್ಕೇರಾ ತಂಡ
🥈 ದ್ವಿತೀಯ ಸ್ಥಾನ: ಡವಳಗಿ ತಂಡ (ಮುದ್ದೇಬಿಹಾಳ)
🥉 ತೃತೀಯ ಸ್ಥಾನ: ಜೋಗುಂಡಿ ತಂಡ
🏅 ನಾಲ್ಕನೇ ಸ್ಥಾನ: ದೇವರಗಡ್ಡಿ ಗಡ್ಡಿ ಗದ್ದೆಮ್ಮದೇವಿ ಸ್ಪೋರ್ಟ್ಸ್ ಕ್ಲಬ್ ತಂಡ

ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಭೀಮರಾಯ ಪೂಜಾರಿ, ದ್ವಿತೀಯ ಬಹುಮಾನವನ್ನು ಮಾನಯ್ಯ ಪೂಜಾರಿ,
ತೃತೀಯ ಬಹುಮಾನವನ್ನು ಅಮರೇಶ ಪೂಜಾರಿ ಹಾಗೂ ನಾಲ್ಕನೇ ಬಹುಮಾನವನ್ನು ಶಿವಪ್ಪ ಗೆದ್ದಮರಿ ಅವರು ಬಹುಮಾನಗಳನ್ನು ನೀಡಿ ಕ್ರೀಡೆಗೆ ಮೇರಗು ತಂದಿದ್ದಾರೆ.

ಪಂದ್ಯಾವಳಿಯ ವೇಳೆ ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಟಗಾರರನ್ನು ಪ್ರೋತ್ಸಾಹಿಸಿದರು. ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಕ್ರೀಡಾ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಯಶಸ್ವಿಯಾಯಿತು.

ಹೆಚ್ಚಿನ ಸುದ್ದಿ