ಚನ್ನಮ್ಮನ ಕಿತ್ತೂರು: ಕರ್ನಾಟಕ ರಾಜ್ಯ ರಾಜ್ಯ ರೈತ ಸಂಘ ಹಮ್ಮಿಕೊಂಡಂತಹ ಕರ್ನಾಟಕ ಬಂದ್ ಗೆ ಕಿತ್ತೂರು ತಾಲೂಕಿನ ಸರ್ವ ರೈತ ಬಾಂಧವರು ಬೆಂಬಲವನ್ನ ಸೂಚಿಸಿದ್ದಾರೆ ಹಾಗೂ ಕಿತ್ತೂರು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ರೈತರು ಸೂಚಿಸಿದ್ದಾರೆ, ಅದೇ ರೀತಿ ಕಿತ್ತೂರಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ ಬಾರ ಅಂಗಡಿಗಳು, ಖಾಸಗಿ ಬ್ಯಾಂಕುಗಳು, ಕಿರಾಣಿ ಅಂಗಡಿ, ಬಟ್ಟೆ ಅಂಗಡಿಗಳು ಮತ್ತು ಚಿಕ್ಕ ಪುಟ್ಟ ಅಂಗಡಿಗಳು ಬಂದಾಗಿವೆ, ಮುಂದೆ ಈ ಹೋರಾಟ ತಾರಕಕ್ಕೆ ಹೋಗಬಹುದೆಂದು ರೈತರು ಸೂಚಿಸುತ್ತಿದ್ದಾರೆ,
ಕರ್ನಾಟಕ ಸರ್ಕಾರ ಕಬ್ಬಿನ ಬೆಂಬಲ ಬೆಲೆಯನ್ನು ಸೂಚಿಸಬೇಕೆಂದು ರೈತರು ಮನವಿಯನ್ನು ಮಾಡುತಿದ್ದಾರೆ
ಇವತ್ತು ಸರ್ಕಾರ ರೈತರಿಗೆ ಸ್ಪಂದಿಸದೆ ಇದ್ದರೆ ಮುಂದೆ ಈ ಹೋರಾಟ ಉಗ್ರರೂಪ ತಾಳಬಹುದುದೆಂದು ರೈತರು ಹೇಳಿಕೆ ನೀಡುತ್ತಿದ್ದಾರೆ. ರೈತರು ಪ್ರತಿ ಟನ್ ಕಬ್ಬಿಗೆ 5500ರೂ ಬೆಂಬಲ ಬೆಲೆಯನ್ನು ಕೊಡಬೇಕೆಂದು ಹೇಳಿದ್ದಾರೆ..
ಇಂತ ಸರ್ಕಾರವು ರೈತರ ಮನವಿಯನ್ನು ಸ್ಪಂದಿಸಿ ಅವರಿಗೆ ಸಿಗಬೇಕಾದ ಸೂಕ್ತ ಕಬ್ಬಿನ ಬೆಲೆ ನಿಗದಿ ಮಾಡಬೇಕು ಎಂದು ಸಾರ್ವಜನಿಕರು ಮತ್ತು ರೈತ ಬಾಂಧವರು ಹೇಳಿಕೆ ನೀಡುತ್ತಿದ್ದಾರೆ.
ವರದಿಗಾರರು: ಖಾಸೀಂ ಕುಸುಗಲ್

