KRGRV
Monday, October 19, 2026
Homeಬೆಂಗಳೂರುಕೆಪಿಎಸ್ಸಿ ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ: ಹೊಸ ಪೋರ್ಟಲ್ ಆರಂಭಿಸಿದ ಲೋಕಸೇವಾ ಆಯೋಗ

ಕೆಪಿಎಸ್ಸಿ ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ: ಹೊಸ ಪೋರ್ಟಲ್ ಆರಂಭಿಸಿದ ಲೋಕಸೇವಾ ಆಯೋಗ

​ಬೆಂಗಳೂರು, ಅಕ್ಟೋಬರ್ 19 : ಕರ್ನಾಟಕ ಲೋಕಸೇವಾ ಆಯೋಗವು (KPSC) ತನ್ನ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಬದಲಾಯಿಸಿದ್ದು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ನೂತನ ವೆಬ್‌ಸೈಟ್ ಪೋರ್ಟಲ್ ಅನ್ನು ಚಾಲ್ತಿಗೆ ತಂದಿದೆ.

​ಆಡಳಿತಾತ್ಮಕ ಕಾರಣಗಳಿಂದಾಗಿ ಈ ಬದಲಾವಣೆಯನ್ನು ಮಾಡಲಾಗಿದ್ದು, ಈ ಹಿಂದೆ ಬಳಕೆಯಲ್ಲಿದ್ದ ವೆಬ್‌ಸೈಟ್ ವಿಳಾಸ https://kpsc.kar.nic.in ಅನ್ನು ಬದಲಾಯಿಸಿ, ಈಗ ಹೊಸದಾಗಿ https://kpsc.karnataka.gov.in ವೆಬ್‌ಸೈಟ್ ವಿಳಾಸವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.

​ಇನ್ಮುಂದೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ, ಅಧಿಸೂಚನೆಗಳು ಹಾಗೂ ಅಭ್ಯರ್ಥಿಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ಪಡೆಯಲು ನೂತನ ವೆಬ್‌ಸೈಟ್ https://kpsc.karnataka.gov.in ಅನ್ನು ಮಾತ್ರ ವೀಕ್ಷಿಸಬೇಕೆಂದು ಆಯೋಗದ ಕಾರ್ಯದರ್ಶಿಯವರಾದ ಜ್ಯೋತಿ ಕೆ. ಅವರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ