KRGRV
Friday, July 10, 2026
Homeಜಿಲ್ಲಾ ಸುದ್ದಿಗಳುತೆಗೂರು ಗ್ರಾಮ ಹತ್ತಿರ ಮುಲ್ಲಾದಾಬಾ ಎದುರುಗಡೆ ಶೀರಿ ಎಂಬುವರ ಮಾವಿನ ತೋಟದ ಶೆಡ್ ಮುಂದೆ ಸುಮಾರು...

ತೆಗೂರು ಗ್ರಾಮ ಹತ್ತಿರ ಮುಲ್ಲಾದಾಬಾ ಎದುರುಗಡೆ ಶೀರಿ ಎಂಬುವರ ಮಾವಿನ ತೋಟದ ಶೆಡ್ ಮುಂದೆ ಸುಮಾರು 55 ರಿಂದ 55 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯ ಶವ ದೊರೆತಿರುತ್ತದೆ.ಮೃತನ ಗುರುತು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ..

ಗದಗ: ದಿನಾಂಕ 09.07.2026 ರಂದು ಮಧ್ಯಾಹ್ನ 02.45 ಗಂಟೆ ಸುಮಾರಿಗೆ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ತೆಗೂರು ಗ್ರಾಮ ಹತ್ತಿಯ ಮುಲ್ಲಾದಾಬಾ ಎದುರುಗಡೆ ಬೆಳಗಾವಿಯಿಂದ ಧಾರವಾಡ ಕಡೆ ಸಾಗಿದ ಎನ್‌ಹೆಚ್ 48 ರಸ್ತೆಯ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಬಸವರಾಜ್ ಶೀರಿ ಎಂಬುವರ ಮಾವಿನ ತೋಟದ ಶೆಡ್ ಮುಂದೆ ಸುಮಾರು 55 ರಿಂದ 55 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯ ಶವ ದೊರೆತಿರುತ್ತದೆ.

ಮೃತನ ಶವದ ಚಹರೆ ಪಟ್ಟಿ ಮತ್ತು ವಿವರ
ಹೆಸರು : ತಿಳಿದು ಬಂದಿರುವುದಿಲ್ಲ
ವಯಸ್ಸು : ಅಂದಾಜು 50-55 ವರ್ಷ
ಅಂದಾಜು 5 ಅಡಿ ಎತ್ತರ ತೆಳುವಾದ ಮೈಕಟ್ಟು, ಕೋಲು ಮುಖ, ಗೋದಿಗೆಂಪು ಬಣ್ಣ, ತಲೆಯಲ್ಲಿ ನೆರೆದ ಒಂದು ಇಂಚಿನಷ್ಟು ಉದ್ದದ ಕೂದಲುಗಳು ಇದ್ದು ಕುರುಚಲು ಗಡ್ಡವನ್ನು ಬಿಟ್ಟಿರುತ್ತಾನೆ.
ಬಟ್ಟೆಗಳು : ಬಿಳಿ ಬಣ್ಣದ ಉದ್ದ ತೋಳಿನ ಚೆಕ್ಸ್ ಶರ್ಟ್ & ನೀಲಿ ಬಣ್ಣದ ಬರ್ಮುಡಾ ಚಡ್ಡಿಯನ್ನು ಧರಿಸಿರುತ್ತಾನೆ.
ಬಲಗೈಯಲ್ಲಿ ಸ್ಟೀಲಿನ ಖಡ್ಗ ಹಾಕಿಕೊಂಡಿದ್ದು,ಬಲಗೈ ಮುಂಗೈ ಮೇಲೆ ಹೆಡೆ ಎತ್ತಿದ ನಾಗರಹಾವಿನ ಹಚ್ಚೆ ಹಾಕಿಸಿಕೊಂಡಿರುತ್ತಾನೆ.

ಸದರಿ ಮೃತನ ಗುರುತು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಈ ಕೆಳಕಂಡ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
PSI ಗರಗ 9480804347
CPI ಗರಗ 9480804330
ಧಾರವಾಡ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ .
9480804300, 0836 2233201

ವರದಿಗಾರರು:ಭರತ ಪೂಜಾರ

ಹೆಚ್ಚಿನ ಸುದ್ದಿ