KRGRV
Thursday, November 5, 2026
Homeಕ್ರೀಡೆಡ್ರಗ್ಸ್ ವಿರುದ್ಧ ಅಭಿಯಾನ: ಕರ್ನಾಟಕ ಹುಮ್ಯಾನಿಟಿ ವೇಲ್ಫೇರ್ ಟ್ರಸ್ಟ್‌ನಿಂದ ಕ್ರೀಡಾ ಸಾಮಗ್ರಿ ವಿತರಣೆ

ಡ್ರಗ್ಸ್ ವಿರುದ್ಧ ಅಭಿಯಾನ: ಕರ್ನಾಟಕ ಹುಮ್ಯಾನಿಟಿ ವೇಲ್ಫೇರ್ ಟ್ರಸ್ಟ್‌ನಿಂದ ಕ್ರೀಡಾ ಸಾಮಗ್ರಿ ವಿತರಣೆ

ಬೆಂಗಳೂರು: ಯುವಜನರನ್ನು ಮಾದಕ ವ್ಯಸನದಿಂದ ದೂರವಿಟ್ಟು ಕ್ರೀಡೆಯತ್ತ ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ಹುಮ್ಯಾನಿಟಿ ವೇಲ್ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ **”ಡ್ರಗ್ಸ್ ವಿರುದ್ಧ ಅಭಿಯಾನ”**ದ ಅಂಗವಾಗಿ ಕ್ರೀಡಾ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಪಾಲ್ಗೊಂಡು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಹೆಸ್ಕಾಂ ಅಧ್ಯಕ್ಷ ಅಜ್ಜಮ್ ಪೀರ್ ಖಾದ್ರಿ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಜಬಿ ವುಲ್ಲಾ, ಮುಖಂಡರಾದ ಅಪ್ಪೋಡ ಚಂದ್ರಶೇಖರ, ಡಿಸಿ ರಮೇಶ್, ಗೋವಿಂದರಾಜು, ಅತುಶ್, ರವಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರನ್ನು ಕ್ರೀಡೆ ಹಾಗೂ ಸೃಜನಾತ್ಮಕ ಚಟುವಟಿಕೆಗಳತ್ತ ಪ್ರೋತ್ಸಾಹಿಸುವುದು ಅಗತ್ಯ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಯಿತು.

ಹೆಚ್ಚಿನ ಸುದ್ದಿ