KRGRV
Monday, December 23, 2024
Homeಕ್ರೀಡೆISSF ವಿಶ್ವ ಚಾಂಪಿಯನ್‌ಶಿಪ್‌: 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತೀಯ ಪುರುಷರ ತಂಡಕ್ಕೆ ಕಂಚಿನ...

ISSF ವಿಶ್ವ ಚಾಂಪಿಯನ್‌ಶಿಪ್‌: 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತೀಯ ಪುರುಷರ ತಂಡಕ್ಕೆ ಕಂಚಿನ ಪದಕ

ಬಾಕು:  ಗುರುವಾರ ಇಲ್ಲಿ ಆರಂಭವಾದ ISSF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಿಯಾನ ಪರಿಣಾಮಕಾರಿಯಾಗಿ ಆರಂಭವಾಗಲಿಲ್ಲ. ಏಕೆಂದರೆ ಸ್ಪರ್ಧಿಸಿದ್ದ 6 ಮಂದಿ 10 ಮೀಟರ್ ಏರ್ ಪಿಸ್ತೂಲ್ ಶೂಟರ್ ಗಳಲ್ಲಿ ಯಾರೂ ಕೂಡಾ  2024 ರ ಪ್ಯಾರಿಸ್ ಒಲಿಂಪಿಕ್ ಅರ್ಹತೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಆದರೂ ಪುರುಷರ ತಂಡ ಸ್ಪರ್ಧೆಯಲ್ಲಿ ಸಮಾಧಾನಕರ ಕಂಚಿನ ಪದಕವನ್ನು ಪಡೆಯಿತು.

ಶಿವ ನರ್ವಾಲ್ (579 ಅಂಕಗಳು) ಸರಬ್ಜೋತ್ ಸಿಂಗ್ (578) ಮತ್ತು ಅರ್ಜುನ್ ಸಿಂಗ್ ಚೀಮಾ (577) ಅವರನ್ನು ಒಳಗೊಂಡ ಭಾರತೀಯ ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡ ಒಟ್ಟು 1734 ಅಂಕಗಳೊಂದಿಗೆ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಚೀನಾದ ಜಾಂಗ್ ಬೋವೆನ್ (587) ಲಿಯು ಜುನ್‌ಹುಯಿ (582) ಮತ್ತು ಕ್ಸಿ ಯು (580) ಒಟ್ಟು 1749 ಅಂಕಗಳೊಂದಿಗೆ ಚಿನ್ನದ ಪದಕವನ್ನು ಪಡೆದರು. ಆದರೆ ರಾಬಿನ್ ವಾಲ್ಟರ್ (586) ಮೈಕೆಲ್ ಶ್ವಾಲ್ಡ್ (581) ಮತ್ತು ಪಾಲ್ ಫ್ರೋಹ್ಲಿಚ್ (576) ಅವರನ್ನೊಳಗೊಂಡ ಜರ್ಮನ್ ತಂಡ ಒಟ್ಟು 1743 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು.

ಚೀನಾದ ಶೂಟರ್‌ಗಳು ಎಲ್ಲಾ ನಾಲ್ಕು ಚಿನ್ನದ ಪದಕ ಗೆದ್ದ, ದಿನದಿಂದು ಭಾರತೀಯ ಪುರುಷರು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಳಪೆ ಪ್ರದರ್ಶನ ನೀಡಿದರು. ಅವರಲ್ಲಿ ಯಾರೂ ಕೂಡಾ ಫೈನಲ್‌ಗೆ ಪ್ರವೇಶಿಸಲಿಲ್ಲ.

ಅರ್ಹತಾ ಸುತ್ತಿನ ನಂತರ ನರ್ವಾಲ್ (579) 17ನೇ ಸ್ಥಾನದಲ್ಲಿದ್ದರೆ, ಸರಬ್ಜೋತ್ 578 ಅಂಕಗಳೊಂದಿಗೆ 18ನೇ ಸ್ಥಾನದಲ್ಲಿದ್ದಾರೆ. ಚೀಮಾ  577 ಅಂಕಗಳೊಂದಿಗೆ 26 ನೇ ಸ್ಥಾನ ಪಡೆದರು. ISSF ವಿಶ್ವ ಚಾಂಪಿಯನ್‌ಶಿಪ್ 2024 ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿಯೂ ಆಗಿದೆ.

ಹೆಚ್ಚಿನ ಸುದ್ದಿ