KRGRV
Wednesday, February 4, 2026
Homeಜಿಲ್ಲಾ ಸುದ್ದಿಗಳುSnow fall : ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಮಪಾತ

Snow fall : ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಮಪಾತ

ಡಿಸೆಂಬರ್ 16 : ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಳಿಗಾಲ ಶುರುವಾಯಿತೆಂದರೆ ಹಿಮಪಾತದ ಮಧುರ ಕ್ಷಣಗಳು ಶುರುವಾಗುತ್ತವೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ಸಿಕ್ಕಿಂ ಸಹಿತ ಏಳೆಂಟು ರಾಜ್ಯಗಳಲ್ಲಿ ವರ್ಷದ ಹಿಮಪಾತ ಶುರುವಾಗಿದೆ. ಸ್ಥಳೀಯರು ಈ ಖುಷಿಯ ಕ್ಷಣಗಳನ್ನು ಅನುಭವಿಸಿದರೆ, ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಅಲ್ಲಿನ ಹಿಮ ಕ್ಷಣಗಳ ನೋಟ ಇಲ್ಲಿದೆ.

ಉತ್ತರಾಖಂಡದ ಬಹುಭಾಗದಲ್ಲಿ ಈಗ ಹಿಮಪಾತ ನೋಡುವ ವಿಶೇಷ ಕ್ಷಣ., ಹಿಮಾಚಲ ಪ್ರದೇಶವೊಂದರಲ್ಲಿ ಬಿದ್ದ ಹಿಮಪಾತದ ನಡುವೆಯೂ ಸೇನಾ ಸಿಬ್ಬಂದಿ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ.

ಉತ್ತರಾಖಂಡದ ಪ್ರಸಿದ್ದ ತುಂಗನಾಥ ದೇಗುಲ ಪ್ರದೇಶ ಸಂಪೂರ್ಣ ಹಿಮದಿಂದ ತುಂಬಿ ಹೋಗಿದೆ. ಇಂತಹ ಹಲವಾರು ದೇಗುಲಗಳಿಗೂ ಈಗ ಹಿಮ ಹೊದ್ದ ಸಂದರ್ಭಗಳನ್ನು ಭಕ್ತರು, ಪ್ರವಾಸಿಗರು ಸವಿಯುತ್ತಾರೆ.

ಸಿಕ್ಕಿಂ ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಹಿಮಪಾತದ ಕ್ಷಣಗಳು. ಮನೆಗಳ ಮೇಲೆ ಬಿದ್ದ ಆ ಕ್ಷಣಗಳು ಬಿಳಿ ನೊರೆಯಂತೆ ಕಾಣುತ್ತದೆ. ಸಿಕ್ಕಿಂನ ಪುಟ್ಟ ಊರೊಂದರಲ್ಲಿ ಕಂಡು ಬಂದ ಹಿಮಪಾತದ ನೋಟ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪ್ರದೇಶಗಳು ಅಧಿಕ. ಇಲ್ಲಿಯೂ ಹಿಮಪಾತ ಶುರುವಾಗಿದ್ದು. ಗಿಡಗಳ ಮೇಲೆಯೂ ಹಿಮಬಿದ್ದ ಸನ್ನಿವೇಶ.

ಹಿಮಾಚಲ ಪ್ರದೇಶದ ಮನಾಲಿ ಸಮೀಪದ ಹೆದ್ದಾರಿ. ಹೆದ್ದಾರಿಯಿಂದ ಮುಂದೆ ಹಿಮಚ್ಛಾದಿತ ಬೆಟ್ಟಗಳ ಸಾಲು ಸಾಲು..

ಹೆಚ್ಚಿನ ಸುದ್ದಿ