KRGRV
Friday, October 23, 2026
Homeಜಿಲ್ಲಾ ಸುದ್ದಿಗಳುಗೋವಾ ಕನ್ನಡ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ ಅವರ ತಂದೆ ಸಂಗಪ್ಪ ಮೇಟಿ ನಿಧನ

ಗೋವಾ ಕನ್ನಡ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ ಅವರ ತಂದೆ ಸಂಗಪ್ಪ ಮೇಟಿ ನಿಧನ

ಮುದ್ದೇಬಿಹಾಳ: ಗೋವಾ ಕನ್ನಡ ಪರಿಷತ್ ಅಧ್ಯಕ್ಷ ಸಿದ್ದಣ್ಣ ಎಸ್. ಮೇಟಿ ಅವರ ತಂದೆ ದಿ. ಸಂಗಪ್ಪ ಮೇಟಿ (85) ಅವರು ಗುರುವಾರ ಮಧ್ಯರಾತ್ರಿ ನಿಧನರಾಗಿದ್ದಾರೆ.

ಮೃತರು ಐವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಕುಟುಂಬಸ್ಥರು ಹಾಗೂ ಬಂಧು-ಬಳಗದ ಸಮ್ಮುಖದಲ್ಲಿ ನೆರವೇರಿತು.

ಸಂಗಪ್ಪ ಮೇಟಿ ಅವರ ನಿಧನಕ್ಕೆ ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮೀಜಿ, ಸಿದ್ದನಕೊಳ್ಳ ಕಲಾಪೋಷಕ ಮಠದ ಡಾ. ಶಿವಕುಮಾರ ಸ್ವಾಮೀಜಿ, ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ), ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಬಿ. ಪಾಟೀಲ ಹಾಗೂ ಕಾರ್ಯಕರ್ತರು, ಮುದ್ದೇಬಿಹಾಳ ತಾಲೂಕಿನ ಗಣ್ಯರು, ಗೋವಾ ರಾಜ್ಯದ ಕನ್ನಡಿಗರ ಅಭಿಮಾನಿ ಬಳಗದ ಸದಸ್ಯರು ಹಾಗೂ ತಾಲೂಕಿನ ಹಾಲುಮತ ಸಮಾಜದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹೆಚ್ಚಿನ ಸುದ್ದಿ