KRGRV
Thursday, October 15, 2026
Homeಜಿಲ್ಲಾ ಸುದ್ದಿಗಳುರಾಷ್ಟ್ರೀಯ ಗೋರ್ ಸೇನಾ ಭಾರತ್ ರಾಷ್ಟ್ರೀಯ ಸಂಘಟನೆ

ರಾಷ್ಟ್ರೀಯ ಗೋರ್ ಸೇನಾ ಭಾರತ್ ರಾಷ್ಟ್ರೀಯ ಸಂಘಟನೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಯಲ್ಲಿ ಮಾನ್ಯ ತೇಶಿಲ್ದಾರರು ರವರಿಗೆ ಮನವಿ

ಲಂಬಾಣಿಗರ ಗುಳೆ ಹೋಗುವುದು ಟ್ರೆಡಿಷನಲ್ಲಿ ಎಂದ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆಯನ್ನು ರಾಷ್ಟ್ರೀಯ ಗೋರ ಸೇನಾ ತೀವುವಾಗಿ ಖಂಡಿಸುತ್ತದೆ

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಲಂಬಾಣಿ ಗರು ಹಾಗೂ ಬೇರೆ ಕೆಲವರು ಪ್ರತಿ ವರ್ಷ ಕಾಪಿ ತೋಟ ಮತ್ತು ಕಬ್ಬು ಕಡೆಯಲು ಗುಳೆ ಹೋಗುತ್ತಾರೆ
ಅವರನ್ನು ಬಿಟ್ಟುಬಿಡಿ ಎಂದು ಹೇಳಿಕೆ ನೀಡಿರುವುದು ಪ್ರಕ್ರಿಯೆಯಲ್ಲಿ ಪ್ರಕಟವಾಗಿದೆ

ಡಿಸಿಎಂ ಅವರು ಅವರ ಹೇಳಿಕೆಯನ್ನು ರಾಷ್ಟ್ರೀಯ ಘೋಷಣಾ ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ಖಂಡಿಸುತ್ತದೆ ಗುಳೆ ಹೋಗುವದು ನಮ್ಮ ಸಮಾಜದ ಟ್ರೆಡಿಷಲ್ ಅಲ್ಲ ಬಡವರ ಬದುಕಿನ ಅನಿವಾರ್ಯತೆ ಮೂರು ಸುತ್ತಿನ ಅನ್ನಕ್ಕಾಗಿ ಹೊಟ್ಟೆಪಾಡಿಗಾಗಿ ಮಕ್ಕಳ ವಿದ್ಯಾ ಅಭ್ಯಾಸಕ್ಕಾಗಿ ಸಾಲ ತೀರಿಸಲು ತಮ್ಮ ಊರು ತಾಂಡ ಕುಟುಂಬವನ್ನು ಬಿಟ್ಟು ಕಾಡು ತೋಟಗಳಲ್ಲಿ ಕೂಲಿ ಮಾಡುವುದು ಎಷ್ಟು ನೋವಿನ ಸಂಗತಿ ಎಂದು ಬಡವರಿಗೆ ಮಾತ್ರ ಗೊತ್ತು

ಬಡವರ ಕಷ್ಟ ನೋವು ಅರಿಯದೆ ಇಂತಹ ಹಗುರವಾದ ಹೇಳಿಕೆ ನೀಡುವುದು ಒಬ್ಬ ಜವಾಬ್ದಾರಿಯತ ಉಪಮುಖ್ಯಮಂತ್ರಿ ಸ್ಥಾನದಲ್ಲಿರು ವವರಿಗೆ ಸೋಬೇ ತರುವುದಿಲ್ಲ

ಬಂಜಾರ ಸಮಾಜದ ಶತಮಾನಗಳಿಂದ ದೇಶದ ಅಭಿವೃದ್ಧಿಗೆ ದುಡಿದ ಸಮಾಜ ನಮ್ಮನ್ನು ಎಂದಿಗೂ ಗುಳ್ಳೆ ಕಾರ್ಮಿಕರು ಎಂದು ಹಣೆಪಟ್ಟಿ ಕಟ್ಟಿ ನಮ್ಮ ಸಂಕಷ್ಟವನ್ನು ಟ್ರೇಡಿಷನಲ್ ಎಂದು ಹೀಯಾಳಿಸುವುದು ನಮ್ಮ ಸ್ವಾಭಿಮಾನಕ್ಕೆ ಮಾಡಿದ ಅಪಮಾನ

ಆದರಿಂದ ಡಾಕ್ಟರ್ ಜಿ ಪರಮೇಶ್ವರ್ ಅವರು ಹೇಳಿಕೆಯನ್ನು ಹಿಂಪಡೆದು ಲಂಬಾಣಿ ಸಮಾಜದ ಕ್ಷಮೆ ಕೇಳಬೇಕು ಸರ್ಕಾರ ಕೂಡಲೇ ಗುಳೆ ಹೋಗುವ ಕಾರ್ಮಿಕರಿಗೆ ಶಾಶ್ವತ ಉದ್ಯೋಗ ನರೇಗಾ ಕೆಲಸ ಮತ್ತು ಬರ ಪರಿಹಾರವನ್ನು ಒದಗಿಸಬೇಕು ಎಂದು ರಾಷ್ಟ್ರೀಯ ಗೋರ್ ಸೇನಾ ವತಿಯಿಂದ ಒತ್ತಾಯಿಸುತ್ತೇವೆ

ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ್ಸೆನ ಭಾರತ್ ರಾಷ್ಟ್ರೀಯ ಸಂಘಟನೆ ಹುಣಸಗಿ ತಾಲೂಕು ಪದಾಧಿಕಾರಿಗಳು ಹಾಗೂ ಬಂಜಾರ ಸಮಾಜದ ಯುವಕ ಮುಖಂಡರು ಉಪಸ್ಥಿತರಿದ್ದರು ….. ಜಿಲ್ಲಾ ವರದಿಗಾರರು ಶಿವು ರಾಠೋಡ.

ಹೆಚ್ಚಿನ ಸುದ್ದಿ