KRGRV
Wednesday, September 30, 2026
Homeಬೆಂಗಳೂರುವಿದ್ಯಾರ್ಥಿಗಳ ನೆನಪಿನ ಶಕ್ತಿ, ಸ್ಮಾರ್ಟ್‌ ಅಧ್ಯಯನ ಮತ್ತು ವೇಗದ ಓದುವಿಕೆಗೆ ಆನ್‌ ಲೈನ್‌ ತರಗತಿ ಪ್ರಾರಂಭ...

ವಿದ್ಯಾರ್ಥಿಗಳ ನೆನಪಿನ ಶಕ್ತಿ, ಸ್ಮಾರ್ಟ್‌ ಅಧ್ಯಯನ ಮತ್ತು ವೇಗದ ಓದುವಿಕೆಗೆ ಆನ್‌ ಲೈನ್‌ ತರಗತಿ ಪ್ರಾರಂಭ – ರಂಗಲಕ್ಷ್ಮಿ ಶ್ರೀನಿವಾಸ

ಬೆಂಗಳೂರು,ಸೆ.29: ವಿದ್ಯಾರ್ಥಿಗಳ ನೆನಪಿನ ಶಕ್ತಿ, ಸ್ಮಾರ್ಟ್‌ ಅಧ್ಯಯನ ಮತ್ತು ವೇಗದ ಓದುವಿಕೆ ತಂತ್ರಗಳಲ್ಲಿ ಮಾನ್ಯತೆ ಪಡೆದ ಮೆಮೊರಿ ಟೆಕ್ನಿಕ್ ತರಬೇತುದಾರರು, ನಗೆ ಯೋಗದಲ್ಲಿ ಗಿನ್ನೆಸ್‌, ಏಷ್ಯಾ ವಿಶ್ವದಾಖಲೆ ನಿರ್ಮಿಸಿರುವ ರಂಗಲಕ್ಷ್ಮಿ ಶ್ರೀನಿವಾಸ ಸ್ಮಾರ್ಟ್‌ ಅಧ್ಯಯನಕ್ಕಾಗಿ ಆನ್‌ ಲೈನ್‌ ತರಗತಿಗಳನ್ನು ಆರಂಭಿಸಿದ್ದಾರೆ.

ವೇಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಹೆಚ್ಚು ಮಾಹಿತಿಯನ್ನು ಕಡಿಮೆ ಸಮಯದಲ್ಲಿ ಕಲಿತು, ಅರ್ಥಮಾಡಿಕೊಂಡು, ಅಗತ್ಯವಿದ್ದಾಗ ಸ್ಮರಣ ಶಕ್ತಿಯಿಂದ ಹೊರತೆಗೆದು ಬಳಸುವ ಸಾಮರ್ಥ್ಯ ಹೊಂದಿರುವುದು ಅತ್ಯಂತ ಮುಖ್ಯವಾಗಿದೆ. ಗಂಟೆಗಟ್ಟಲೆ ಓದುವುದಕ್ಕಿಂತ ಸರಿಯಾದ ವಿಧಾನದಲ್ಲಿ ಓದುವುದು ಮತ್ತು ಕಲಿಯುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, 5ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಆನ್‌ ಲೈನ್‌ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಮರಣ ತಂತ್ರಗಳು, ಅಧ್ಯಯನ ಕೌಶಲ್ಯ ಮತ್ತು ವೇಗದ ಓದುವಿಕೆಯಲ್ಲಿ ತರಬೇತಿ ನೀಡುತ್ತಿರುವ ರಂಗಲಕ್ಷ್ಮಿ ಶ್ರೀನಿವಾಸ ಅವರು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು, ಪೋಷಕರು ಹಾಗೂ ವೃತ್ತಿಪರರಿಗೆ ಪರಿಣಾಮಕಾರಿ ಕಲಿಕಾ ತಂತ್ರಗಳನ್ನು ಪರಿಚಯಿಸಿದ್ದಾರೆ. “ಹೆಚ್ಚು ಸಮಯ ಓದುವುದಲ್ಲ, ಬದಲಿಗೆ ಸ್ಮಾರ್ಟ್‌ t ಆಗಿ ಓದುವುದು ಮುಖ್ಯ” ಅನೇಕ ವಿದ್ಯಾರ್ಥಿಗಳು ಸಾಕಷ್ಟು ಸಮಯ ಓದಿದರೂ ಓದಿದ್ದು ನೆನಪಿನಲ್ಲಿ ಉಳಿಯದಿರುವುದು, ಪದೇಪದೇ ಪುನರಾವರ್ತನೆ ಮಾಡಬೇಕಾಗುವುದು, ಓದುವಾಗ ಗಮನ ಕಡಿಮೆಯಾಗುವುದು, ದೊಡ್ಡ ಪ್ರಮಾಣದ ಪಠ್ಯವನ್ನು ನಿರ್ವಹಿಸಲು ಕಷ್ಟವಾಗುವ ಸಮಸ್ಯೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ:+91 95139 16025 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಕೇವಲ ಹೆಚ್ಚು ಸಮಯ ಓದಲು ಹೇಳುವುದಕ್ಕಿಂತ, ಹೇಗೆ ಓದಬೇಕು, ಹೇಗೆ ನೆನಪಿಟ್ಟುಕೊಳ್ಳಬೇಕು ಮತ್ತು ಹೇಗೆ ವೇಗವಾಗಿ ಓದಿ ಅರ್ಥಮಾಡಿಕೊಳ್ಳಬೇಕು ಎಂಬ ಕೌಶಲ್ಯಗಳನ್ನು ಕಲಿಸುವುದು ಮುಖ್ಯ. ದಿನನಿತ್ಯ ವಿದ್ಯಾರ್ಥಿಗಳು ಅಪಾರ ಪ್ರಮಾಣದಲ್ಗಲಿ ಕಲಿಯಬೇಕಾಗುತ್ತದೆ. ಮಾಹಿತಿಯನ್ನು ಕೇವಲ ಪುನರಾವರ್ತಿಸುವ ಬದಲು, ಅದನ್ನು ಸಂಬಂಧಿಸಿ, ಸಂಘಟಿಸಿ ಮತ್ತು ಸೂಕ್ತ ಸ್ಮರಣ ತಂತ್ರಗಳನ್ನು ಬಳಸಿ ನೆನಪಿನಲ್ಲಿ ಉಳಿಸಿಕೊಳ್ಳುವ ವಿಧಾನಗಳನ್ನು ತರಬೇತಿಯಲ್ಲಿ ಪರಿಚಯಿಸಲಾಗಿದೆ. ಇದು ಪಠ್ಯ ವಿಷಯಗಳ ಜೊತೆಗೆ ಪರೀಕ್ಷಾ ಸಿದ್ಧತೆ ಮತ್ತು ಹೆಚ್ಚಿನ ಮಾಹಿತಿಯನ್ನು ನಿರ್ವಹಿಸುವ ಅಗತ್ಯವಿರುವ ಕ್ಷೇತ್ರಗಳಲ್ಲಿಯೂ ಉಪಯುಕ್ತವಾಗಬಹುದು ಎಂದು ಹೇಳಿದ್ದಾರೆ.

ಸ್ಮಾರ್ಟ್‌ ಅಧ್ಯಯನ ಕೌಶಲ್ಯದಲ್ಲಿ ಓದುವ ವಿಧಾನದಲ್ಲೇ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. “ಎಷ್ಟು ಗಂಟೆ ಓದಿದೆ?” ಎನ್ನುವುದಕ್ಕಿಂತ “ಓದಿದ ಸಮಯವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿದೆ?” ಎಂಬುದು ಮುಖ್ಯ. ಸರಿಯಾದ ಯೋಜನೆ, ಗಮನ ಕೇಂದ್ರೀಕರಿಸುವ, ಟಿಪ್ಪಣಿ ಮಾಡಿಕೊಳ್ಳುವ, ಪುನರಾವರ್ತನೆ ಮತ್ತು ಕಲಿಕೆ ತಂತ್ರಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು. ಹೆಚ್ಚುತ್ತಿರುವ ಪಠ್ಯಭಾರ ಮತ್ತು ಮಾಹಿತಿಯ ಪ್ರಮಾಣದ ಹಿನ್ನೆಲೆಯಲ್ಲಿ ವೇಗವಾಗಿ ಓದುವ ಸಾಮರ್ಥ್ಯವೂ ಮಹತ್ವ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಓದುವ ವೇಗ ಸಮಗ್ರ ಮತ್ತು ಮಾಹಿತಿ ಸಂಸ್ಕರಣಾ ತಂತ್ರಗಳನ್ನು ಅಭ್ಯಾಸ ಮಾಡಿಸಲಾಗುವುದು. ಈ ರೀತಿಯ ಕಲಿಕಾ ಕೌಶಲ್ಯ ಕೇವಲ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಾಲೇಜು ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು, ಸ್ಮರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು, ಉದ್ಯೋಗಿಗಳು, ವೃತ್ತಿಪರರು ಹಾಗೂ ಜೀವನಪೂರ್ತಿ ಕಲಿಯಲು ಬಯಸುವವರಿಗೂ ಇವು ಸಹಾಯಕವಾಗಲಿದೆ. ಕಲಿಕೆಯನ್ನು ಒಂದು ಕೌಶಲ್ಯವಾಗಿ ನೋಡುವ ಸಮಯ ಬಂದಿದೆ. ಪ್ರತಿಯೊಬ್ಬರಿಗೂ ಕಲಿಯುವ ಸಾಮರ್ಥ್ಯವಿದೆ. ಆದರೆ ಸರಿಯಾದ ಕಲಿಕಾ ತಂತ್ರಗಳು ಮತ್ತು ನಿರಂತರ ಅಭ್ಯಾಸದ ಮೂಲಕ ಆ ಸಾಮರ್ಥ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ರಂಗಲಕ್ಷ್ಮಿ ಶ್ರೀನಿವಾಸ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ: +91 95139 16025

ಹೆಚ್ಚಿನ ಸುದ್ದಿ