KRGRV
Friday, October 30, 2026
Homeಸಿನಿಮಾ​ಸಿನಿಮಾ ಆಸಕ್ತರಿಗೆ ಸುವರ್ಣಾವಕಾಶ: ಚಲನಚಿತ್ರ ಅಕಾಡೆಮಿಯಿಂದ 'ಸಿನಿ ಸಂವಾದ' ಮತ್ತು 'ಮಹಿಳಾ ಸಿನಿ ಸಂವಾದ' ತರಬೇತಿ...

​ಸಿನಿಮಾ ಆಸಕ್ತರಿಗೆ ಸುವರ್ಣಾವಕಾಶ: ಚಲನಚಿತ್ರ ಅಕಾಡೆಮಿಯಿಂದ ‘ಸಿನಿ ಸಂವಾದ’ ಮತ್ತು ‘ಮಹಿಳಾ ಸಿನಿ ಸಂವಾದ’ ತರಬೇತಿ ಕಾರ್ಯಾಗಾರಕ್ಕೆ‌ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

​ಬೆಂಗಳೂರು, ಅಕ್ಟೋಬರ್ 30 (ಕರ್ನಾಟಕ ವಾರ್ತೆ) :

ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಯುವ ಪ್ರತಿಭೆಗಳು ಹಾಗೂ ಮಹಿಳೆಯರಿಗಾಗಿ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳಾದ “ಸಿನಿ ಸಂವಾದ” ಹಾಗೂ “ಮಹಿಳಾ ಸಿನಿ ಸಂವಾದ” ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾರ್ಯಕ್ರಮಗಳ ವಿವರ:
2026 ನೇ ನವೆಂಬರ್ 14 ರಿಂದ 16 ರ ವರೆಗೆ ಸಿನಿ ಸಂವಾದ ಕುರಿತು 3 ದಿನಗಳ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದ್ದು, ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 21 ವರ್ಷಕ್ಕಿಂತ ಮೇಲ್ಪಟ್ಟ ಯುವ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಬರಹಗಾರರು, ನಟನೆಯಲ್ಲಿ ಆಸಕ್ತಿ ಉಳ್ಳವರ ಹಾಗೂ ಸಿನಿಮಾಸಕ್ತರು ಭಾಗವಹಿಸಬಹುದು.

2026 ನೇ ನವೆಂಬರ್ 17 ರಂದು ಮಹಿಳಾ ಸಿನಿ ಸಂವಾದ ಕುರಿತು 1 ದಿನದ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದ್ದು,
​21 ವರ್ಷಕ್ಕಿಂತ ಮೇಲ್ಪಟ್ಟ ಆಸಕ್ತ ಯುವತಿಯರು ಮತ್ತು ಮಹಿಳೆಯರಿಗೆ ಚಲನಚಿತ್ರ ನಿರ್ಮಾಣ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿವರ ಹಾಗೂ ನಿಯಮಗಳು:

​ಅರ್ಜಿ ಸಲ್ಲಿಸಲು 2026 ನೇ ನವೆಂಬರ್ 10 ಕೊನೆಯ ದಿನವಾಗಿದ್ದು, ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತರು,ಅಕಾಡೆಮಿಯ ಅಧಿಕೃತ ವೆಬ್‌ಸೈಟ್ www.kca.karnataka.gov.in ಅಥವಾ kca.filmmakingworkshop@gmail.com ಇಮೇಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ವಿಶೇಷ ​ ಸೂಚನೆ:
ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಅಕಾಡೆಮಿಯ ವತಿಯಿಂದ ಯಾವುದೇ ವಸತಿ ಸೌಲಭ್ಯ ಹಾಗೂ ಪ್ರಯಾಣದ ಖರ್ಚನ್ನು ಒದಗಿಸುವುದಿಲ್ಲ.

​ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ: 8904645529 (ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದು) ಅಥವಾ
​ಇಮೇಲ್: chalanachitraacademy@gmail.com ಅಥವಾ ದೂರವಾಣಿ: 080-23493410 / 080-23493441 ಅಥವಾ ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ ಸಂಕೀರ್ಣ, ನಂ.20/ಎ, ನಂದಿನಿ ಲೇಔಟ್, ಬೆಂಗಳೂರು – 560096.ಇಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ವಿನೋದ್ ಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ